ಸೋಮವಾರ, ಆಗಸ್ಟ್ 2, 2010

ನಿಜವಾದ ಅಸ್ತಿತ್ವ ದೇಹವಲ್ಲ ,ನಿಜವಾದ ಅಸ್ತಿತ್ವ ಅರಿವಿನ ರೂಪದಲ್ಲಿರುವ ಆತ್ಮ.



ನಿಜವಾದ  ಅಸ್ತಿತ್ವ  ದೇಹವಲ್ಲ ,ನಿಜವಾದ ಅಸ್ತಿತ್ವ  ಅರಿವಿನ ರೂಪದಲ್ಲಿರುವ ಆತ್ಮ. ಅದ್ದರಿಂದ ಆತ್ಮ ದೃಷ್ಟಿಯಿಂದ ಎಲ್ಲವನು  ಅವಲೋಕಿಸಿ ಸತ್ಯವೇನೆಂದು  ಅರಿತುಕೊಲ್ಲುವದು ಅತ್ಯವಶ್ಯಕವಾಗಿದೆ. ದೇಹದೃಷ್ಟಿ ಯಿಂದ ಎಲ್ಲವನ್ನು ಅವಲೋಕಿಸಿದರೆ ಕಲ್ಪನೆ ಅಥವಾ ಊಹೆಯ ಲೋಕದಲ್ಲಿ ಮುಳುಗಿ ದೇಹ ಬ್ರಮೆ ಮತ್ತಷ್ಟು ಸ್ಥಿರವಾಗುತ್ತದೆ.  ಅದ್ದರಿಂದ ದೇಹಬ್ರಮೆಯಿಂದ  ಅನುಬವವಾದಂತಹ ಎಲ್ಲ ಅನುಬವಗಳು ಮಿತ್ಯವೆಂದು ಅರಿಯುವದು ಅತ್ಯಗತ್ಯ.  ಈ ಮೂರು ಅವಸ್ತೆಗಳ ಅನುಬವದ ಬ್ರಮೆ,  ಆತ್ಮ ದಿಂದ ಉದ್ಬವಿಸಿ, ಮತ್ತೆ ಆತ್ಮವಾಗಿ ಲೀನ ವಾಗುವವು.  ಅದ್ದರಿಂದ ಯಾವದೇ ಅನುಬವ ಮರೀಚಿಕೆ ಮಾತ್ರ.  ಅವಕ್ಕೆ ಸತ್ಯದ ಪರಿಮಿತಿಯಲ್ಲಿ ಅಸ್ತಿತ್ವವಿಲ್ಲ.   

"ನಾನು" ಎಂಬುದು  ಒಂದು ಮ್ರುಗಜಲ್ . "ನಾನು" ಎಂಬುದು ಈದ್ದಾಗ ಮಾತ್ರ  ಅಜ್ಞಾನ ವಿರುತ್ತದೆ  .ನಾನು" ಎಂಬುದು ಈದ್ದಾಗ ಮಾತ್ರ  ಬ್ರಮೆ ಇರುತ್ತದೆ   .  ನಾನು" ಎಂಬುದು ಈದ್ದಾಗ ಮಾತ್ರ ದ್ವೈಥ್  ಬಾವ ವಿರುತ್ತದೆ . ನಾನು" ಎಂಬುದು ಈದ್ದಾಗ ಮಾತ್ರ  ಮನಸ್ಸು ಇರುತ್ತದೆ ." ನಾನು" ಎಂಬುದು ಇದ್ದಾಗ ಮಾತ್ರ ಜಗತ್ತು ಇರುತ್ತದೆ. "ನಾನು" ಎಂಬುದು ಇದ್ದಾಗ ಮಾತ್ರ ದೇಹ ಇರುತ್ತದೆ." ನಾನು"  ಎಂಬುದು ಇದ್ದಾಗ ಮಾತ್ರ ಜಾಗೃತ ಹಾಗೂ ಸ್ವಪ್ನ ದ ಅನುಬವ ಆಗುತ್ತದೆ.  ಅದ್ದರಿಂದ "ನಾನು" ಎಂಬುದು ದೇಹಕ್ಕೆ ಮಾತ್ರ ಸೀಮೀಥವಾಗಿರದೆ, ಇಡೀ  ಜಾಗೃತಾವಸ್ತೆಯನ್ನು ಪ್ರತಿನಿದಿಸುತ್ತದೆ.      

ಭಾನುವಾರ, ಆಗಸ್ಟ್ 1, 2010

ದೇಹಬ್ರಮೆಯ ಆದಾರದ ಮೇಲೆ ಅನುಬವಿಸಿ ಸಂಗ್ರಹಿಸಿದ ದೇಹಾದಾರಿಥ್ ಜ್ಞಾನವು, ಅಜ್ಞಾನವೇ ಹೊರತು ಬ್ರಮ್ಹ ಜ್ಞಾನವಲ್ಲ.


ದೇಹ ,ಜಗತ್ತು ಮತ್ತು ವ್ಯಕ್ತಿಗಥ್  ಅನುಬವಗಳು ನಿಜವೆಂದು ಅನುಬವಿಸುವದು ಜಾಗೃತಾವಸ್ತೆಯ ಬ್ರಮೆಯಲ್ಲಿ ಮಾತ್ರ. ಸ್ವಪ್ನವಸ್ತೆಯ ಅನುಬವಗಳು ಜಾಗೃತಾವಸ್ತೆಯಲ್ಲಿ   ಬ್ರಮೆಯೆಂದು ಅರಿವಾಗಿ ಅದು ಮಿತ್ಯವೆಂದು ಅರಿವಾಗುವದು.   ಅದೇ ರೀತಿಯಲ್ಲಿ ಜಾಗೃತಾವಸ್ತೆಯ ಬ್ರಮೆಯು ದೇಹ ಸ್ವ  ಅಸ್ತಿತ್ವವಲ್ಲ ,  ಮೂಲ ಅಸ್ತಿತ್ವ ಅರಿವಿನ ರೂಪದಲ್ಲಿರುವ ನಿರ್ಗುಣ,  ನಿರಾಕಾರವಾದ್ ಆತ್ಮ ಎನ್ನುವದು  ಅರಿವಾದಾಗ ಮಾತ್ರ.  ದೇಹಬ್ರಮೆಯ  ಆದಾರದ ಮೇಲೆ ಅನುಬವಿಸಿ ಸಂಗ್ರಹಿಸಿದ ದೇಹಾದಾರಿಥ್    ಜ್ಞಾನವು,  ಅಜ್ಞಾನವೇ ಹೊರತು ಬ್ರಮ್ಹ ಜ್ಞಾನವಲ್ಲ.  

ದೇಹಾದಾರಿಥವಾದ    ದರ್ಮ,  ವೇದಾಂತ್,ತತ್ವ ,ಸಿದ್ದಾಂತ್ ದರ್ಮ ಗ್ರಂಥ್ ,ಶಾಸ್ತ್ರ ಗಳ ಸಂಸ್ಕಾರ ಹೊಂದಿದವರಿಗೆ, ಮತ್ತು ಈ ಸಂಸ್ಕಾರಗಳನ್ನು    ಭಾವಥಿರೆಕದಿಂದ ಮತ್ತು   ಉದ್ರೆಕಪರವಾಗಿ ಜೀವನದಲ್ಲಿ ಅಳವಡಿಸಿರುವ ಕಾರಣ ,ಹಾಗೂ ದೇಹಾದಾರಿತವಾದ    ಸತ್ಯವನ್ನು ,ಸತ್ಯವೆಂದು ಸ್ವೀಕರಿಸಿದ ಕಾರಣ,  ಸ್ವಿಕರಿಸದ ಸತ್ಯ ಬಿಟ್ಟು ಬೇರೆ ಎನನ್ನು ಅಸ್ವಿಕರಿಸಿರುವ ಕಾರಣ, ತಾವು ಸ್ವೀಕರಿಸಿದ ಸಂಸ್ಕಾರದ ಚ್ವಕಟ್ಟಿನಲ್ಲೇ , ಪರಮ ಸತ್ಯದ ಜ್ಞಾನ ಪ್ರಾಪ್ತಿಯಾಗುವದು  ಸಾಧ್ಯವೆನ್ನುವ  ಬ್ರಮೆ ಹೊಂದಿರುವ ಕಾರಣ, ಹಾಗೂ ದೇಹಾದಾರಿತವಾದ      ಜನ್ಮ,  ಪುನರ್ಜನ್ಮ ಗಳ ಸಿದ್ದಾಂತ್ ದಲ್ಲಿ      ವಿಷ್ವಾಸ  ಹೊಂದಿರುವ ಕಾರಣ, ದೇಹಾದರಿತವಾದ  ಕರ್ಮ ಸಿದ್ದಾಂತ್ ದಲ್ಲಿ  ಅಪರಿಮಿತ್ ನಂಬಿಕೆ ಹೊಂದಿರುವ ಕಾರಣ, ಈ  ದೇಹ ಬ್ರಮೆಯ ಪರಿಮಿತಿಯಿಂದ್  ಹೊರಗೆ  ಇರುವ ಪರಮ ಸತ್ಯದ ಅರಿವೂ ಆಗದ ಕಾರಣ, ಆತ್ಮ ಜ್ಞಾನ ಪ್ರಾಪ್ತ ವಾಗುವದಿಲ್ಲ.   

ದೇಹಾದಾರಿತವಾದ  ಸಂಸ್ಕಾರ್ ಗಳ ಪರಿಮಿತಿಯಿಂದ ಹೊರ ಬಂದು ಸತ್ಯದ ಅನ್ವೇಷಣೆಯಲ್ಲಿ ತೊಡಗಿದರೆ ಮಾತ್ರ ಪರಮ ಸತ್ಯದ  ಮಾರ್ಗ  ಸುಗಮವಾಗುವದು.
                                 

ಹುಟ್ಟು,ಜೀವನ್,ಸಾವು ಮತ್ತು ಜಗತ್ತಿನ ಅನುಬವ ನಿಜವೆಂದು ತಿಳಿದ ಸಂಸ್ಕಾರವಂಥರಿಗೆ ಆತ್ಮ ಜ್ಞಾನ ಆಗುವದು ಅಸಾದ್ಯ.


ಜಾಗೃತಾವಸ್ತೆಯಲ್ಲಿ ದೇಹ ಮತ್ತು ಜಗತ್ತಿನ ಬ್ರಮೇಯನ್ನು ಅನುಬವಿಸುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ ,ಈ ಹುಟ್ಟು,ಜೀವನ್  ,ಸಾವಿನ  ಅನುಬವಗಳು ನಿಜವೆಂದು ತಿಳಿದಿರುವ ಕಾರಣ, ಈ ಬ್ರಮೆಯ ಬಂದನದಿಂದ ಬಿಡಿಸಲಾರದಷ್ಟು  ತೊಡಕಾಗಿದೆ.  ದೇವರು,ದರ್ಮ ,ದರ್ಮ ಗ್ರಂಥಗಳು, ದೇವರುಗಳ ಅಸ್ತಿತ್ವ  ,  ದೇಹ  ಆದಾರಿತ   ಕಲ್ಪನೆಗಳಿಂದ ಸೃಷ್ಟಿ ಯಾದಂತ್ ನಂಬಿಕೆ ಆದಾರಿತ್ ಬ್ರಮಯಲ್ಲಿಯ, ಬ್ರಮಾ  ಸತ್ಯ .

ಈ ಬ್ರಮಾ  ಸತ್ಯವನ್ನು ನಿಜವೆಂದು,  ಸಂಸ್ಕಾರವಂತರಾಗಿ ಮಡಿವಂತಿಕೆಯಿಂದ ಮೋಕ್ಶ್ ಸಿಗುವದೆಂದು ನಂಬಿ ,ತಾವೂ  ಇತರರಿಗಿಂತ ಬಿನ್ನವೆಂದು ನಂಬಿ, ಕರ್ಮದ ಲೆಕ್ಕಾಚಾರ್ ದಿಂದ ಪಾಪ,ಪುಣ್ಯಗಳ ತೂಲನೆಯಲ್ಲಿ , ಜೀವನ್ ನಡೆಸುವ ಬುದ್ಧಿ ಜೀವಿಗಳಿಗೆ,  ತಮ್ಮ ಸ್ವ ಅಸ್ತಿತ್ವ ಈ ದೇಹ  ಅಲ್ಲ , ನಿರಾಕಾರ ವಾದ ಆತ್ಮ ಎಂಬ ಅರಿವಿರದಗೆ, ಅಸತ್ಯದ ಮಾರ್ಗವನ್ನು ಸತ್ಯವೆಂದು ನಂಬಿ ಹುಟ್ಟು,ಜೀವನ್,ಸಾವು ಮತ್ತು ಜಗತ್ತಿನ  ಅನುಬವ ನಿಜವೆಂದು ತಿಳಿದ ಸಂಸ್ಕಾರವಂಥರಿಗೆ  ಆತ್ಮ ಜ್ಞಾನ ಆಗುವದು ಅಸಾದ್ಯ.                           

ಜಾಗೃತಾವಸ್ತೆಯಲ್ಲಿ ಅನುಬವಕ್ಕೆ ಬರುವ ಹುಟ್ಟು,ಜೀವನ್,ಸಾವು ಹಾಗೂ ಜಗತ್ತಿನ ವಯ್ಯಕ್ತಿಕ್ ಅನುಬವಗಳು ಮರೀಚಿಕೆ ಮಾತ್ರ. ಆತ್ಮವೇ ಪರಮ ಸತ್ಯ ಅಥವಾ ಪರ ಬ್ರಹ್ಮ .


ಶರೀರದ ಚಟುವಟಿಕೆಗಳು, ಬೌದಿಕ ಚಟುವಟಿಕೆಗಳು ದೇಹ ಬ್ರಮೆಯ ಆದಾರಿತ ಆಗಿರುತ್ತವೆ.   ದೇಹಬ್ರಮೆ ,ಜಗತ್ತಿನ ಬ್ರಮೆ ಆದಾರಿತ್ ಆಗಿರುತ್ತದೆ. ದೇಹ ಮತ್ತು ಜಗತ್ತಿನ ಬ್ರಮೆ ಜಾಗ್ರುತಾವಸ್ತೆಯ ಬ್ರಮೆಯನ್ನು  ಅವಲಂಬಿಸಿರುತ್ತದೆ.   ಜಾಗೃತಾವಸ್ತೆಯ ಬ್ರಮೆಯು ಅರಿವಿನ ರೂಪದಲ್ಲಿರುವ ಆತ್ಮವನ್ನು ಅವಲಂಬಿಸಿರುತ್ತದ್ದೆ.   ಆತ್ಮವೂ ನಿರಾವಲಂಬಿ.  ಅದ್ದರಿಂದ  ಕಾರಣ ಮತ್ತು  ಫಲದ ಪರಿಮಿತಿಯಿಂದ ಹೊರತಾದದ್ದು.  ಕಾರಣ ಮತ್ತು ಫಲದ ತರ್ಕ, ದೇಹ   ಬ್ರಮೆಯ ಪರಿಮಿತಿಯಲ್ಲಿ ಮಾತ್ರ ಸತ್ಯ .  ಆದ್ದರಿಂದ ಸೃಷ್ಟಿ ಮತ್ತು ಸೃಷ್ಟಿಕರ್ತ್ ತರ್ಕದ  ವಾದವೂ  ದೇಹಬ್ರಮಾ  ಆದಾರಿತ್.  ಆತ್ಮ ದೃಷ್ಟಿಯಲ್ಲಿ   ಸೃಷ್ಟಿ ಮತ್ತು ಸೃಷ್ಟಿಕರ್ತ್ ತರ್ಕದ  ವಾದಕ್ಕೆ  ಹುರುಳಿಲ್ಲ. ಯಾಕೆಂದರೆ ಸತ್ಯದ ಪರಿಮಿತಿಯಲ್ಲಿ, ಅತ್ಮವನ್ನು ಹೊರತು ಪಡೆಸಿ ಬೇರೆಲ್ಲವೂ ಮಿತ್ಯ. 

ಆತ್ಮ ವಂದೇ ಪರಮ ಸತ್ಯವಾದದ್ದು. ನಿರಾಕಾರವಾದ  ಆತ್ಮವನ್ನು  ಬಿಟ್ಟು ಬೇರೆಲ್ಲವೂ ಮರೀಚಿಕೆ ಮಾತ್ರ.ಪ್ರಕಟವಾಗಿ ಅದೃಷ್ಯ್ ವಾಗುವ ಮೂರು ಅವಸ್ತೆಗಳು ಮರೀಚಿಕೆ ಮಾತ್ರ.  ಅದ್ದರಿಂದ ಜಾಗೃತಾವಸ್ತೆಯಲ್ಲಿ ಅನುಬವಕ್ಕೆ ಬರುವ ಹುಟ್ಟು,ಜೀವನ್,ಸಾವು ಹಾಗೂ ಜಗತ್ತಿನ ವಯ್ಯಕ್ತಿಕ್  ಅನುಬವಗಳು ಮರೀಚಿಕೆ ಮಾತ್ರ.  ಆತ್ಮವೇ ಪರಮ ಸತ್ಯ ಅಥವಾ ಪರ ಬ್ರಹ್ಮ .           


               

ಅರಿವಿನ ರೂಪದಲ್ಲಿರುವ ಆತ್ಮವೇ ಪರಮ ಸತ್ಯ. ಆತ್ಮದ ಹೊರತು ಇನೆಲ್ಲವುಗಳು ಮಿತ್ಯ ಮಾತ್ರ.


ಹೇಗೆ, ಹಿಮ ಅಥವಾ ಮೋಡ ನೀರಿನಿಂದ ಉದ್ಬವವಾಗಿದೆಯೋ ,ನೀರಿಲ್ಲದೆ ಅವುಗಳ ಅಸ್ತಿತ್ವ ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ  ಈ  ಮೂರು ಅವಸ್ತೆಗಳು    ಅರಿವಿನಿಂದ  ಉದ್ಬವವಾಗಿ ,ಅರಿವಿನ ಆದಾರದಿಂದಲೇ ಅಸ್ತಿತ್ವಹೊಂದಿ , ಮತ್ತೆ ಅರಿವಾಗಿ ,ಅರಿವಿನಲ್ಲಿಯೇ  ಲೀನವಾಗುವವು. ಆದರಿಂದ ಅರಿವಿಲ್ಲದೆ ಈ ಮೂರು ಅವಸ್ತೆಗಳಿಗೆ ಸ್ವ ಅಸ್ತಿತ್ವವಿಲ್ಲ. ಆದರಿಂದ ಪರಾವಲಂಬಿಯದಂತ್ ಈ ಮೂರು ಅವಸ್ತೆಗಳಿಗೆ, ಅರಿವಿಲ್ಲದೆ ಸ್ವತಂತ್ರವಾದ್    ಅಸ್ತಿತ್ವವಿಲ್ಲ. ಆದರಿಂದ  ಅರಿವಿನ ರೂಪದಲ್ಲಿರುವ ಆತ್ಮವೇ ಪರಮ ಸತ್ಯ. ಆತ್ಮದ ಹೊರತು ಇನೆಲ್ಲವುಗಳು  ಮಿತ್ಯ ಮಾತ್ರ.   

ಆತ್ಮವೇ ನಿತ್ಯ,ನಿರ್ವಿಕಾರ್ ಹಾಗೂ ಶಾಶ್ವತ ವಾದದ್ದು . ಅಶಾಶ್ವತವಾದ ಈ   ಮೂರು   ಅವಸ್ತೆಗಳ  ಅನುಬವಗಳು ಪ್ರಕಟ ಮತ್ತು ಅದೃಶ್ಯ ವಾಗುವ ಅರಿವೂ ಇರುವದು ಆತ್ಮಕ್ಕೆ,  ಈ ದೇಹಕಲ್ಲ.   ಆದರಿಂದ ಈ ಮೂರು ಅವಸ್ತೆಗಳ್ಳನ್ನು, ದೇಹ ದೃಷ್ಟಿಯಿಂದ ಅವಲೋಕಿಸದೇ, ಆತ್ಮ ದೃಷ್ಟಿಯಿಂದ ಅವಲೋಕಿಸುವದರಿಂದ,  ಆತ್ಮ ಜ್ಞಾನದ ಮಾರ್ಗ ಸುಗಮವಾಗುವದು.                        

ದೇಹ, ದೇಹವಾಗಿ ಉಳಿಯದೆ ,ಜಗತ್ತು ,ಜಗತ್ತಾಗಿ ಉಳಿಯದೆ, ಈ ಮನಸ್ಸು , ನಿರ್ಗುಣ,ನಿರಾಕಾರವಾದ ಆತ್ಮ ವಾಗಿ , ತನ್ನ ಸ್ವ ಸ್ವಬಾವವಾದ ಅನಂತ ಇರುವೆಕೆಯಲ್ಲಿ ಸ್ಥಿರಗೊಳ್ಳುವದು.



ಸ್ವಯಂ ಅನ್ವೇಷಣೆಯಲ್ಲಿ ಆಳವಾಗಿ ತೊಡಗಿದಾಗ ,ಸ್ವಯಂ ವಿಚಾರಣೆಯಲ್ಲಿ ಅಜ್ಞಾನ ಕರಗುತ್ತಾ ಎಲ್ಲ ಸಂದೇಹಗಳಿಗೆ ,  ತಂತಾನೆ ಉತ್ತರಗಳು ಸಿಕ್ಕು ಸಂಶಯಗಳೆಲ್ಲ ನಿವಾರಣೆಯಾಗಿ, ಆತ್ಮಜ್ಞಾನ ಆಗುತ್ತದೆ.  ಯಾವಾಗ ಅರಿವಿನಲ್ಲಿರುವ  ದೇಹ ಮತ್ತು ಜಗತ್ತಿನ ಬ್ರಮೆ, ಆತ್ಮ ಜ್ಞಾನದಿಂದ,  ಬ್ರಮೆ ಕರಗಿ ಬ್ರಮ್ಹವಾಗುತ್ತದೆಯೋ, ಆವಾಗ ದೇಹ, ದೇಹವಾಗಿ ಉಳಿಯದೆ ,ಜಗತ್ತು ,ಜಗತ್ತಾಗಿ ಉಳಿಯದೆ, ಈ ಮನಸ್ಸು ,  ನಿರ್ಗುಣ,ನಿರಾಕಾರವಾದ ಆತ್ಮ ವಾಗಿ , ತನ್ನ ಸ್ವ ಸ್ವಬಾವವಾದ ಅನಂತ ಇರುವೆಕೆಯಲ್ಲಿ ಸ್ಥಿರಗೊಳ್ಳುವದು.   

ಆಕಾರ, ಸಮಯ, ಅಂತರದ ಜ್ಞಾನವಿರುವದು ಬ್ರಮೆಯಲ್ಲಿ ಮಾತ್ರ. ಅದ್ದರಿಂದ ಆಕಾರ,ಸಮಯ,ಅಂತರ ಬ್ರಮೆ ಮಾತ್ರ. ಪರಮ ಸತ್ಯವೂ, ಆಕಾರ,ಸಮಯ,ಅಂತರಗಳ  ಬ್ರಮೆಯಿಂದ ಹೊರತಾಗಿದೆ. ಆದ್ದರಿಂದ ,   ಆಕಾರ, ಸಮಯ, ಅಂತರದ  ಆದಾರಿತ್ ಸಿದ್ದಾಂತಗಳು ,ಬ್ರಹ್ಮಾದಾರಿತ್ ಸಿದ್ದಾಂತಗಳು.   ಬ್ರಮಾದರಿತ್  ಸಿದ್ದಾಂತಗಳ   ಆದಾರದ ಮೇಲೆ ಪರಮ  ಸತ್ಯವನ್ನು ದ್ರುಡಿಕರಿಸಲು  ಸಾದ್ಯವಿಲ್ಲ.      

ಯಾವಾಗ ಮೂರು ಅವಸ್ತೆಗಳು ಬ್ರಮೆಯಲ್ಲಿ ಮಾತ್ರ ನಿಜವೆಂಬ ಅರಿವು ಆಗುತ್ತದೆಯೋ, ಅವಾಗ ಬ್ರಮೇಯನ್ನು ಮನದಿಂದ ಬೆರ್ಪಡಿಸಿದಾಗ ಪರಮ ಸತ್ಯವೇನೆಂದು ಅರಿವಾಗುವದು.



ಕನಸಿನಲ್ಲಿ ಅನುಬವಿಸಿದ  ಹುಟ್ಟು,  ಜೀವನ  ,ಸಾವು ಹಾಗೂ ಜಗತ್ತಿನ ಅನುಬವಗಳ  ಸತ್ಯ,  ಕನಸಿಗೆ  ಮಾತ್ರ  ಸೀಮೀತ ವಾಗಿರುವದು, ಅದೇ ರೀತಿಯಲ್ಲಿ ,   ಜಾಗೃಥಾವಸ್ತೆ ಯಲ್ಲಿ   ಅನುಬವಿಸಿದ  ಹುಟ್ಟು,  ಜೀವನ  ,ಸಾವು ಹಾಗೂ ಜಗತ್ತಿನ ಅನುಬವಗಳ  ಸತ್ಯ,  ಜಾಗೃಥಾವಸ್ತೆಗೆ  ಮಾತ್ರ ಸೀಮೀತವಾಗಿರುವದು.  ಯಾವಾಗ ಮೂರು ಅವಸ್ತೆಗಳು  ಬ್ರಮೆಯಲ್ಲಿ  ಮಾತ್ರ ನಿಜವೆಂಬ  ಅರಿವು  ಆಗುತ್ತದೆಯೋ, ಅವಾಗ ಬ್ರಮೇಯನ್ನು ಮನದಿಂದ ಬೆರ್ಪಡಿಸಿದಾಗ,  ಪರಮ ಸತ್ಯವೇನೆಂದು  ಅರಿವಾಗುವದು.  ಅರಿವೇ ಆತ್ಮ.  ಆತ್ಮವೇ ಪರಮ ಸತ್ಯ ವೆಂಬ ಅರಿವೂ ಅರಿವಿಗೇ ಆದಾಗ ,ತನ್ನ ತನದ ಅರಿವೂ ಆತ್ಮಕ್ಕೆ  ಆದಾಗ, ಅರಿವಿನಿಂದ ಸೃಷ್ಟಿಗೊಂಡತ  ಬ್ರಮೆ ಕರಗಿ ಮತ್ತೆ ಆತ್ಮ ವಾದಾಗ ,ಈ ಬ್ರಮೆಯಲ್ಲಿ ಅನುಬವಿಸಿದ  ಹುಟ್ಟು,  ಜೀವನ  ,ಸಾವು ಹಾಗೂ ಜಗತ್ತಿನ ಅನುಬವಗಳು  ಕೇವಲ್ ಮರೀಚಿಕೆ ಮಾತ್ರ .  ಆದರಿಂದ ಪರಮ ಸತ್ಯದ    ಅನ್ವೇಷಣೆಯಲ್ಲಿ, ಮೊದಲೀಗೇ  ಸ್ವಯಂ ಅಸ್ಥಿತ್ವದ್ ಜ್ಞಾನ ಅಗತ್ಯ. ದರ್ಮಾದರಿತ್,  ದೇಹಾ ದಾರಿತ್  ಉಹೇಗಳ ಆದಾರದ  ಚ್ವಕಟ್ಟಿನಲ್ಲಿ ಸತ್ಯದ ಸಂಶೋದನೆ ಅಸಾದ್ಯ.