ನಿರಾಕಾರ ಮಾರ್ಗದಿಂದ ಆತ್ಮಜ್ಞಾನ ನಿಶ್ಚಿತ. ಆಕಾರದಿಂದ ನಿರಾಕಾರದೆಡೆಗೆ ಸಾಗಲು ದೇಹಾದಾರಿತವಾದಂತಹ ದರ್ಮ,ದೇವರು, ಜಗತ್ತು ಹಾಗೂ ದೇಹದರಿತವಾದ ಎಲ್ಲ ಜ್ಞಾನಗಳು ಮೂಲವಾದ ಅಡೆತಡೆಗಳು. ಅವುಗಳನ್ನು ಮಿರಿ ವಿಚಾರಗಳು ಮುಂದೆ ಸಾಗಿದಾಗ ಮಾತ್ರ ಪರಮ ಸತ್ಯದ ಅರಿವಾಗತೋಡಗುವದು.
ವ್ಯಕ್ತಿಗತ ಅನುಬವಗಳಿಗೂ ಹಾಗೂ ಸ್ವ ಅಸ್ತಿತ್ವಕ್ಕೂ ಯಾವ ಸಂಬಂದವೂ ಇಲ್ಲ. ಸ್ವ ಅಸ್ತಿತ್ವ ನಿರಾಕಾರವಾಗಿರುವದರಿಂದ ಅದು ಸಂಸ್ಕಾರ ಹಾಗೂ ಸಂಸಾರ ಬಂದನದ ಕಕ್ಷೆಯಿಂದ ಹೊರಗಿರುವದರಿಂದ, ಜನನ,ಜೀವನ ,ಮರಣದ ಹಾಗೂ ಜಗತ್ತಿನ ಅನುಬವಗಳು, ಸ್ವ ಅಸ್ತಿತ್ವದ ದೃಷ್ಟಿಕೋನದಲ್ಲಿ ಮಿತ್ಯ ಮಾತ್ರ. ಆದರಿಂದ "ನಾನು" ಎಂಬುದು ಸ್ವ ಅಸ್ತಿತ್ವ ಅಲ್ಲ ಎಂಬುದನ್ನು ಅರಿಯುವದು ಅತಿ ಅವಶ್ಯ.