ದೇಹಕ್ಕೆ ಇಟ್ಟ ಹೆಸರನ್ನು ಸ್ವ ಅಸ್ತಿತ್ವ ಎಂದು ಬಗೆದು ದೇಹವಲ್ಲದ ನಿರಾಕಾರವಾದ ಈ ಸ್ವ ಅಸ್ತಿತ್ವದ ಬಗ್ಗೆ ನಿರ್ದರಿಸುವದು ಮೂರ್ಖತನ. ಈ ನಿರಕಾರವಾದ ಸ್ವ ಅಸ್ತಿತ್ವದ ಆದಾರದ ಮೇಲೆ ಅಸ್ತಿತ್ವಹೊಂದಿರುವ ಮನಸ್ಸಿನ ರೂಪದಲ್ಲಿರುವ ಜಗತ್ತು ಹಾಗೂ ಈ ಜಗತ್ತಿನ ಅಸ್ತಿತ್ವದ ಮೇಲೆ ಆದರಿಸಿರುವ ವ್ಯಕ್ತಿಗತ ಜೀವನ, ಅಥವಾ ಜನನ,ಜೀವನ ಹಾಗೂ ಮರಣದ ಅನುಬವಗಳೆಲ್ಲವೂ ಸ್ವ ಅಸ್ತಿತ್ವದ ದೃಷ್ಟಿಕೋನದಲ್ಲಿ ಮರೀಚಿಕೆ ಮಾತ್ರ.
ಇಡಿ ಬ್ರಹ್ಮಾಂಡದಲ್ಲಿ ನಿರಾಕಾರವಾಗಿ ಆವರಿಸಿರುವ ಅರಿವಿನ ರೂಪದಲ್ಲಿರುವ ಆತ್ಮವನ್ನು ಚರ್ಮ ದೃಷ್ಟಿಯಿಂದ ಗ್ರಹಿಸುವದು ಅಸಾದ್ಯ. ಮನಸ್ಸಿನ ರೂಪದಲ್ಲಿರುವ ಬ್ರಹ್ಮಾಂಡವೆ ಆತ್ಮದಲ್ಲಿರಿವಾಗ ಹಾಗೂ ಆತ್ಮಾದಾರಿತವಾಗಿರುವಾಗ , ಈ ಬ್ರಹ್ಮಾಂಡದ ಮೂಲವನ್ನಿರಿಯದೆ ಪರಮ ಸತ್ಯದ ಅರಿವೂ ಅಸಾದ್ಯ.

0 comments:
ಒಂದು ಕಮೆಂಟನ್ನು ಪೋಸ್ಟ್ ಮಾಡಿ