ಶುಕ್ರವಾರ, ಸೆಪ್ಟೆಂಬರ್ 3, 2010

ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಲು ,ಯಾವ ಯಾವ ಅಡೆ ತಡೆಗಳಿವೆಯೆಂದು ಮೊದಲು ಅರಿತು, ಆ ಅಡೆ ತಡೆಗಳ್ಳನ್ನು ಕಿತ್ತೊಗೆದಾಗ ಮಾತ್ರ ಪರಮ ಜ್ಞಾನದ ಮಾರ್ಗ ಸುಗಮವಾಗುವದು.



ಪ್ರತಿಯೊಂದು ಜೀವ, ಜಂತುವಿನಲ್ಲಿ  "ನಾನು" ಬಾವನೆಯು ಮೂಲವಾಗಿರುವದರಿಂದ  ಹಾಗೂ ಈ "ನಾನು" ಎಂಬುದನ್ನು ದೇಹಕ್ಕೆ ಮಾತ್ರ ಸೀಮಿತ ಗೊಳಿಸಿ ಕೊಂಡು ಜಗತ್ತನ್ನು  ಅವಲೋಕಿಸುವದರಿಂದ ಪರಮ ಸತ್ಯದ   ಜ್ಞಾನವಾಗುವದು ಅಸಾದ್ಯ.  ಅಜ್ಞಾನದಿಂದ  ಜ್ಞಾನದ ಕಡೆಗೆ ಸಾಗಲು ,ಯಾವ  ಯಾವ   ಅಡೆ ತಡೆಗಳಿವೆಯೆಂದು  ಮೊದಲು ಅರಿತು, ಆ  ಅಡೆ ತಡೆಗಳ್ಳನ್ನು ಕಿತ್ತೊಗೆದಾಗ  ಮಾತ್ರ  ಪರಮ   ಜ್ಞಾನದ ಮಾರ್ಗ ಸುಗಮವಾಗುವದು.  

ದರ್ಮ, ಕಲ್ಪಿತ  ದೇವರ ನಂಬಿಕೆ, ದರ್ಮ ಗ್ರಂಥಗಳ ಪಾಂಡಿತ್ಯ, ಯೋಗ, ತನಗೆಲ್ಲ ತಿಳಿದಿದೆ ಎಂಬ ಅಹಂಕಾರ, ಸಾಂಪ್ರದಾಯಿಕವಾಗಿ ಬಂದಂತಹ ಸಂಸ್ಕಾರಗಳು,  ತನಗೆ ಗೊತ್ತಿದನ್ನು ಬಿಟ್ಟು  ಮತ್ತೇನನ್ನು  ಪರೀಕ್ಷಿಸಲು  ನಿರಾಕರಿಸುವ ಸ್ವಬಾವ ಇವೆಲ್ಲವುಗಳು    ಪರಮ ಸತ್ಯದ ಮಾರ್ಗದಲ್ಲಿ ಮೂಲ ಅಡ್ಡ ಗೋಡೆಗಳು. ಇವೆಲ್ಲವನ್ನೂ ಮಿರಿ ಸತ್ಯದ ಅನ್ವೇಷಣೆ ಕೈ ಕೊಂಡಲ್ಲಿ  ಮಾತ್ರ ಆತ್ಮ ಜ್ಞಾನ ಪ್ರಾಪ್ತಿಯಾಗುವದು. 

ಭಗವಾನ್ ಬುದ್ದ,  ದರ್ಮ,  ದೇವರ ನಂಬಿಕೆ, ದರ್ಮ ಗ್ರಂಥಗಳನ್ನು ದಿಕ್ಕರಿಸಿ ಸ್ವಯಂ ಅನ್ವೇಷಣೆ ಕೈ ಕೊಂಡಾಗ  ಅವನಿಗೆ ಜ್ಞಾನೋದಯವಾಯಿತು.  ಆದರಿಂದ ಆತ್ಮ ಜ್ಞಾನಕ್ಕೆ ,ಧರ್ಮ,ದೇವರ ನಂಬಿಕೆ, ಧರ್ಮಗ್ರಂಥಗಳ ಆದಾರ ಸಾದನಗಳಲ್ಲ ವೆಂಬುದನ್ನು ಸತ್ಯದ  ಅನ್ವೇಷಕರು ಅರಿಯುವದು ಅತ್ಯವಶ್ಯ .   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ