ಹುಟ್ಟು ,ಜೀವನ್ ಮತ್ತು ಸಾವಿನ ಬ್ರಮೆಯಲ್ಲಿ ಸಿಕ್ಕು , ವ್ಯಕ್ತಿಗತವಾದ ಜೀವನದ ಅನುಬವವೇ ನಿಜವೆಂದು ಬಗೆದು, ದೇಹದಾರಿತ ಧರ್ಮ,ದೇವರು, ಸಿದ್ದಾಂತ,ವೇದಾಂತಗಳ ಅನುಯಾಯಿಗಳಾಗಿ, ಸತ್ಯವನ್ನು ಹುಡುಕಲು ತೊಡಗಿದರೆ ಪರಮ ಸತ್ಯದ ಜ್ಞಾನವಾಗುವದು ಅಸಾದ್ಯ.
ಜಗತ್ತಿದ್ದರೆ ಮಾತ್ರ ವ್ಯಕ್ತಿಗತವಾದ ಅನುಬವ ಸಾದ್ಯ. ಜಾಗೃತಾವಸ್ತೆ ಅಥವಾ ಸ್ವಪ್ನಾವಸ್ತೆಯಲ್ಲಿ ಮಾತ್ರ ಜಗತ್ತಿನ ಅನುಬವ ಆಗುವದು. ಸ್ವಪನಾವಸ್ತೆಯ, ವ್ಯಕ್ತಿ ಹಾಗೂ ಜಗತ್ತು ಹೇಗೆ ಮಿತ್ಯವೋ, ಹಾಗೆಯೇ ಜಾಗ್ರತಾವಸ್ತೆಯ ವ್ಯಕ್ತಿ ಮತ್ತು ಜಗತ್ತು ಮಿತ್ಯವಾದದ್ದು . ಯಾಕೆಂದರೆ ಇಡಿಯಾಗಿ ಸ್ವಪ್ನವನ್ನು ಕಂಡದ್ದು ಜಾಗ್ರುತಾವಸ್ತೆಯಲ್ಲಿರುವ ದೇಹವಲ್ಲ. ಅದೇ ರೀತಿಯಲ್ಲಿ ಜಾಗೃತಾವಸ್ತೆಯನ್ನು ಕಂಡದ್ದು ದೇಹ ಅಲ್ಲ . ಈ ಮೂರು ಅವಸ್ತೆಗಳ ಬಂದು ಹೋಗುವಿಕೆಯ ಅರಿವಿರುವದು ದೇಹಕಲ್ಲ , ನಿರಾಕಾರವಾದ ಆತ್ಮಕ್ಕೆ ಎಂಬ ಅರಿವಾದಾಗ ಈ ಮೂರು ಅವಸ್ತೆಗಳು ಆತ್ಮದಿಂದ ಉದ್ಬವಿಸಿದ ಮರೀಚಿಕೆ ಮಾತ್ರ . ಆದರಿಂದ ನಿರ್ಗುಣ ನಿರಾಕಾರವಾದ ಸಾಕ್ಷಿ ರೂಪದಲ್ಲಿರುವ ಆತ್ಮ ವಂದೇ ಪರಮ ಸತ್ಯ ,ಬಾಕಿ ಎಲ್ಲವೂ ಮಿತ್ಯ.
ಯಾವಾಗ ಆತ್ಮ ಜ್ಞಾನವಾಗುವದೋ ,ಆವಾಗ ಜಾಗೃತಾವಸ್ತೆಯು ಮಿತ್ಯವೆಂಬುದು ಅರಿವಾಗುವದು. ಯಾವುದಕ್ಕೆ ಈ ಮಿತ್ಯವಾದ ಅನುಬವಗಳ ಬಂದು ಹೋಗುವಿಕೆಯ ಅರಿವಿದೆಯೋ, ಅದೊಂದೇ ಸತ್ಯ , ಬಾಕಿ ಎಲ್ಲ ಅನುಬವಗಳು ಮಿತ್ಯವಾಗಿರುತ್ತವೆ. ಇವೆಲ್ಲವನ್ನೂ ಅರಿಯಲು ಅಂತರಾಳದಲ್ಲಿ ವಿವೇಕದ ಸ್ವಯಂ ವಿಚಾರಣೆಯಿಂದ ಮಾತ್ರ ಸಾದ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ