ಸೋಮವಾರ, ಸೆಪ್ಟೆಂಬರ್ 20, 2010

ಅದ್ವೈತ ಸತ್ಯದ ಅರಿವೂ ಬರೀ ಕೆಲ ವಿಚಾರವಂತರ ಹಾಗೂ ಜ್ಞಾನಿಗಳ ಪುಸ್ತಕಗಳ ಅಧ್ಯಯನದಿಂದ ಹಾಗೂ ಅವುಗಳ ಬಗ್ಗೆ ವಿಮರ್ಶೆ ಮಾಡುವದರಿಂದ ಆಗುವದು ಅಸಾದ್ಯ.



ಅದ್ವೈತ ಸತ್ಯದ ಅರಿವೂ ಬರೀ ಕೆಲ ವಿಚಾರವಂತರ ಹಾಗೂ ಜ್ಞಾನಿಗಳ ಪುಸ್ತಕಗಳ ಅಧ್ಯಯನದಿಂದ ಹಾಗೂ ಅವುಗಳ ಬಗ್ಗೆ ವಿಮರ್ಶೆ ಮಾಡುವದರಿಂದ ಆಗುವದು ಅಸಾದ್ಯ. ಎಲ್ಲ ವಿಷಯಗಳನ್ನು  ಆಳವಾಗಿ ಅಬ್ಯಾಸಿಸಿ ಅವುಗಳನ್ನು  ಮನದಾಳದಲ್ಲಿ  ವಿಶ್ಲೇಷಿಸಿ ಅವುಗಳ ಗೂಡಾರ್ಥ ಗಳನ್ನೂ  ಅರಗಿಸಿಕೊಂಡಾಗ ಮಾತ್ರ ಪರಮ ಸತ್ಯವೇನೆಂಬುದರ  ಅರಿವಾಗುವದು. ಪುಸ್ತಕ ಪಾಂಡಿತ್ಯ ದಿಂದ  ಹಾಗೂ ಪಾಂಡಿತ್ಯ ಪ್ರದರ್ಶನದಿಂದ ಆತ್ಮ ಜ್ಞಾನ ಅಸಾದ್ಯ. 

ದ್ವೈತ ಹಾಗೂ ಅದ್ವೈತ ಮತಗಳಲ್ಲ. ದ್ವೈತ ಹಾಗೂ ಅದ್ವೈತವೂ  ಆತ್ಮದ  ಸ್ವಬಾವ.  ಅಜ್ಞಾನದಲ್ಲಿ ಆತ್ಮವು ದ್ವೈತ  ಬಾವದಲ್ಲಿರುವದು. ಸ್ವ ಸ್ವಬಾವದ ಅರಿವಿನಲ್ಲಿ ಆತ್ಮವು ಅದ್ವೈತ ಬಾವದಲ್ಲಿರುವದು.    ಅದ್ವೈತ  ಸತ್ಯವು ಯಾವ ಧರ್ಮಕ್ಕೂ ಸೀಮಿತವಾಗಿಲ್ಲ.  ಯಾಕೆಂದರೆ ಆತ್ಮವು ನಿರಾಕಾರವಾಗಿರುವದರಿಂದ , ಅರಿವಿನರೂಪದಲ್ಲಿರುವ ಆತ್ಮವನ್ನು  ಹೊರತು ಪಡೆಸಿ ಎರಡನೆಯ ವಸ್ತು ಇರುವದಿಲ್ಲ. ಆದ್ದರಿಂದ ಆತ್ಮವಂದೇ ಪರಮ ಸತ್ಯ ಹಾಗೂ ಆತ್ಮವನ್ನು ಹೊರತು  ಪಡೆಸಿ ಮತೆಲ್ಲವುಗಳು ಆತ್ಮದಿಂದ ಉದ್ಬವವಾದ ಮರೀಚಿಕೆ ಮಾತ್ರ.  ಮರಿಚಿಕೆ ಹೇಗೆ ಸತ್ಯವಲ್ಲವೋ ಹಾಗೇ ಈ ದೇಹ ಮತ್ತು ಜಗತ್ತು ಸತ್ಯವಲ್ಲ. ಆದರೇ ಈ ಮರೀಚಿಕೆ ಉದ್ಬವವಾಗಲು    ಕಾರಣವಾದ ವಸ್ತು ಸತ್ಯವಾದದ್ದು.  ಇದನ್ನು ಅರಿಯುವದು ಅತ್ಯವಶ್ಯ.   ಅದ್ವೈತ ಸತ್ಯದ ಅರಿವಿನಿಂದ ಆತ್ಮ ಜ್ಞಾನವಾಗುವದು.  ಈ ಅರಿವೂ ಉಪನಿಷದ್ದುಗಳು ಸಾರುವ ಹಾಗೇ ಯಾವುದೇ  ಪಾಂಡಿತ್ಯದಿಂದ ಆಗುವದಿಲ್ಲ.  
 [ This Ataman cannot be attained by the study of the Vedas, or by intelligence, or by much hearing of sacred books. It is attained by him alone whom It chooses. To such a one Ataman reveals Its own form. [Katha Upanishad Ch-II -23-P-20]
Mundaka Upanishad  :-
This Ataman cannot be attained through study of the Vedas, nor through intelligence, nor through much learning. He who chooses Ataman—by him alone is Ataman attained. It is Ataman that reveals to the seeker Its true nature. [    3 –page-70 Mundaka Upanishad  Upanishads by Nikilanada]
     
Enhanced by Zemanta

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ