ಗುರುವಾರ, ಸೆಪ್ಟೆಂಬರ್ 9, 2010

ಈ ಜಗತ್ತು ಮಿತ್ಯವಾದದ್ದು ಎಂಬುದನ್ನು ಮೊದಲು ಅರಿಯುವದು ಅತ್ಯವಶ್ಯ.



ಜಾಗೃತ ಮತ್ತು  ಸ್ವಪ್ನಾವಸ್ತೆಗಳಲ್ಲಿ  ದೇಹವೇ  ಸ್ವ ಅಸ್ತಿತ್ವ ಎಂಬ ಬ್ರಮೆ ಮೂಲವಾಗಿರುವದರಿಂದ  ಮತ್ತು ಬ್ರಮೇಯನ್ನು     ಸತ್ಯವೆಂದು    ದೃಡಕರಿಸುವ ಮತ್ತು ಬ್ರಮೆಯ ಅನುಬವನ್ನು ಮುನ್ನಡೆಸುವ   ಶಕ್ತಿಯಾದ ಈ 'ನಾನು" ಎಂಬ  ಬಾವ ,ಮಾಯೆ ಎಂದು  ತಿಳಿಯದ ರೀತಿಯಲ್ಲಿ  ಆವರಿಸಿ ಕೊಂಡಿರುವದರಿಂದ, ಈ " ನಾನು" ಎಂಬ ಅನಿಸಿಕೆ   ದೇಹಕ್ಕೆ ಮಾತ್ರ ಸೀಮಿತವಾಗಿರದೇ, ಇಡಿ ಜಗತ್ತಿಗೆ ಅವರಿಸಿರವುದನ್ನು ಗಮನಿಸ ಬೇಕಾಗಿರುವದು,  ಸ್ವ ಅಸ್ತಿತ್ವದ ಅನ್ವೇಷಣೆಯಲ್ಲಿ ಅತ್ಯವಶ್ಯವಾಗಿದೆ. 

ಆದ್ದರಿಂದ  ಈ  "ನಾನು"  ಎಂಬುದು    ದೇಹ ಮಾತ್ರ ವಲ್ಲ  ಇಡಿ ಜಗತ್ತು ಎಂಬುದನ್ನು ತಿಳಿದು ಕೊಂಡಾಗ ಮಾತ್ರ  ಪರಮ ಸತ್ಯದ ಮಾರ್ಗ ಸುಗಮ ವಾಗುವದು. ವ್ಯಕ್ತಿಯ ವಯ್ಯಕ್ತಿಕ ಅನುಬವಗಳು ಜಗತ್ತಿನೋಳಗಡೆ ಆಗುವ  ಒಂದು  ಅನುಬವ. ಆದ್ದರಿಂದ ಈ ಜಗತ್ತು ಮಿತ್ಯವಾದದ್ದು ಎಂಬುದನ್ನು ಮೊದಲು ಅರಿಯುವದು ಅತ್ಯವಶ್ಯ.  ಜಾಗೃತಾವಸ್ತೆ ಅಥವಾ ಸ್ವಪ್ನಾವಸ್ತೆಯಾಗಿ ಪ್ರಕಟವಾಗುವ ಈ ಜಗತ್ತಿನ ಮರ್ಮದ  ಬಗ್ಗೆ ಆಳವಾಗಿ ಅದ್ಯಯನ ಕೈಕೊಂಡಾಗ ಮಾತ್ರ ಸತ್ಯ ವೇನೆಂಬುದರ    ಅರಿವಾಗತೊಡಗುವದು.               
Enhanced by Zemanta

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ