ದೇಹ ಸ್ವ ಅಸ್ತಿತ್ವ ಅಲ್ಲ ಎಂದಮೇಲೆ ,ದೇಹದ್ರುಷ್ಟಿಯಿಂದ ಸತ್ಯವನ್ನು ಅನ್ವೆಷಿಸುವದು ಅತಿ ದೊಡ್ಡ ತಪ್ಪು. ದೇಹಾದಾರಿತವಾದ ಎಲ್ಲ ವಿಚಾರಗಳನ್ನು, ನಂಬಿಕೆಗಳನ್ನು ಅನುಬವಗಳನ್ನು ಮಿತ್ಯವೆಂದು ಮನವರಿಕೆ ಮಾಡಿಕೊಂಡಾಗ ಮಾತ್ರ ಸತ್ಯವೇನೆಂದು ಗ್ರಹಿಸಲು ಸಾದ್ಯವಾಗುವದು. ಮೂರು ಅವಸ್ತೆಗಳನ್ನು, ಆತ್ಮದ ದೃಷ್ಟಿಕೋನದಲ್ಲಿ ಅವಲೋಕಿಸಿದರೆ ಮಾತ್ರ ಸತ್ಯವೇನೆಂಬುದರ ಅರಿವಾಗುವದು. ಆದ್ದರಿಂದ ಸ್ವಯಂ ಅನ್ವೇಷಣೆಯಲ್ಲಿ "ನಾನು" ಎಂಬುದು ಸ್ವ ಅಸ್ತಿತ್ವವಲ್ಲ , "ನಾನು" ಎಂಬುದು ಮನಸ್ಸು. ದೇಹ ಹಾಗೂ ಜಗತ್ತು ಸಹಿತವಾದ ಅನುಬವವೇ ಮನಸ್ಸು. ಮನಸನ್ನು ದೇಹಕ್ಕೆ ಮಾತ್ರ ಸೀಮಿತವಾಗಿರದೇ , ದೇಹ ಮತ್ತು ಜಗತ್ತುಗಳೆರಡು ಒಟ್ಟಾಗಿ ಪ್ರಕಟಗೊಳ್ಳುವ ಜಾಗೃತಾವಸ್ತೆ ಅಥವಾ ಸ್ವಪ್ನಾವಸ್ತೆಯ ಅನ್ಬವವೇ ,ಈ ಮನಸ್ಸು.
ಮನಸ್ಸನ್ನು ದೇಹಕ್ಕೆ ಮಾತ್ರ ಸೀಮಿತಗೊಳಿಸಿದಾಗ ದೇಹದೃಷ್ಟಿ ಅಥವಾ ಅಹಂಕಾರ ಉದ್ಬವವಾಗಿ ಜಗತ್ತು ಪ್ರಕಟಗೋಳ್ಳುವದು. ಈ ಪ್ರಕಟಗೊಂಡ ಮನಸ್ಸಿನ ರೂಪದಲ್ಲಿರುವ ಜಗತ್ತೇ ಅಜ್ಞಾನ. ಈ ಅಜ್ಞಾನದಿಂದ ಮುಕ್ತಿಪಡೆಯಲು ಮನಸ್ಸೇನೆಂದು ಹಾಗೂ ಮನಸ್ಸಿನ ಮೂಲದ ಬಗ್ಗೆ ಅರಿಯುವದು ಅತ್ಯವಶ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ