ಮಂಗಳವಾರ, ಸೆಪ್ಟೆಂಬರ್ 14, 2010

ಈ ಅಜ್ಞಾನದಿಂದ ಹೊರಬರಲು , ಅರಿವಿನ ರೂಪದಲ್ಲಿರುವ ಆತ್ಮವೇ ಸ್ವ ಅಸ್ತಿತ್ವವೆಂದು ಅರಿಯುವದು ಅತ್ಯವಶ್ಯ.


ಅಹಂಕಾರದ  ಲಕ್ಷವನ್ನು  ಮನಸ್ಸಿನ ಮೂಲದೆಡೆಗೆ ತಿರುಗಿಸಿ, ಸ್ವ ಅಸ್ತಿತ್ವ ದೇಹವಲ್ಲವೆಂದು ಖಚಿತ ಪಡೆಸಿಕೊಂಡಾಗ ದೇಹ ಸ್ವ ಅಸ್ತಿತ್ವ ಎಂಬ ಬಾವ ಕರಗಿ ಸ್ವ ಅಸ್ತಿತ್ವ ನಿರಾಕಾರವೆಂಬುದು ದ್ರುಡವಾದಾಗ, ಈ ದೇಹ ಸ್ವ ಅಸ್ತಿತ್ವವೆಂದು ತಿಳಿದುಕೊಂಡ  ಎಲ್ಲ ವಿಷಯಗಳು, ಅನುಬವಿಸಿದ ಎಲ್ಲ ಅನುಬವಗಳು ಮಿತ್ಯ ಮಾತ್ರವೆಂದು ಅರಿವಾಗುವದು. 

ಈ  ದೇಹ,ಮಾಂಸ ,ಮೂಳೆ, ರಕ್ತ ಗಳಿಂದ  ರಚಿತವಾಗಿದೆ ಎಂದು ತಿಳಿದಿರುವ  ವ್ಯಕ್ತಿಗೆ, ತಾನೂ  ಹುಟ್ಟಿರುವ ಜಗ್ಗತ್ತಿನ ಸೃಷ್ಟಿಗೆ ಮೂಲವಾದ ಸತ್ವಯಾವುದೆಂಬ ಅರಿವಿರದ ಕಾರಣ, ದೇಹವೇ ಸ್ವ ಅಸ್ತಿತ್ವವೆಂದು  ದೃಡವಾಗಿ ನಂಬಿರುವ  ಕಾರಣ, ಹುಟ್ಟು,ಜೀವನ,ಸಾವಿನ  ಅನುಬವಗಳು ದೇಹದ ಅನುಬವವೆಂದು ತಿಳಿದಿರುವ ಕಾರಣ, ತಾನೂ  ಸ್ವತಂತ್ರ ನಾದ ವ್ಯಕ್ತಿ, ಜಗತ್ತು  ತನ್ನ ಹೊರತಾಗಿದೆ, ಜಗತ್ತು  ತನ್ನ ಹುಟ್ಟಿನ ಪೂರ್ವದಲ್ಲಿ     ಅಸ್ತಿತ್ವದಲ್ಲಿ  ಇತ್ತು, ಎಂಬ  ನಂಬಿಕೆ  ಪ್ರತಿಯೊಬ್ಬ ವ್ಯಕ್ತಿಯಲ್ಲಿ ಬೇರುರಿರುವ ಕಾರಣ,  ಅಜ್ಞಾನ ಆಳವಾಗಿ ಬೇರೂರಿದೆ. ಆದ್ದರಿಂದ  ಈ ಅಜ್ಞಾನದಿಂದ ಹೊರಬರಲು , ಅರಿವಿನ ರೂಪದಲ್ಲಿರುವ ಆತ್ಮವೇ ಸ್ವ ಅಸ್ತಿತ್ವವೆಂದು ಅರಿಯುವದು ಅತ್ಯವಶ್ಯ.       
         

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ