ಶುಕ್ರವಾರ, ಸೆಪ್ಟೆಂಬರ್ 17, 2010

ನಾನು ಎಂಬುದು ಸ್ವ ಅಸ್ತಿತ್ವವಲ್ಲ ಎಂಬುದು ಸ್ವಯಂ ಅನ್ವೇಷಣೆಯಲ್ಲಿ ಮೊದಲು ಅರಿಯುವದು ಅತ್ಯವಶ್ಯ.


"ನಾನು"  ಎಂಬುದು ಸ್ವ ಅಸ್ತಿತ್ವವೆಂಬ ನಂಬಿಕೆ  ದೃಡವಾಗಿರುವದರಿಂದ, ದೇಹ ಮತ್ತು ಜಗತ್ತಿನ ಅನುಬವ ಸತ್ಯವೆಂದು ತಿಳಿದು, ಜಗತ್ತಿನ ಅನುಬವವನ್ನು ದೇಹದೃಷ್ಟಿಯಿಂದ ಅವಲೋಕಿಸುವದರಿಂದ, ಹುಟ್ಟು ,ಜೀವನ  ಹಾಗೂ  ಸಾವಿನ ಅನುಬವಗಳ ಆದಾರದ ಮೇಲೆ, ಸತ್ಯವೇನೆಂದು ಅರಿಯುವದು ಅಸಾದ್ಯ. 

ಆದ್ದರಿಂದ  ನಾನು ಎಂಬುದು ಸ್ವ ಅಸ್ತಿತ್ವವಲ್ಲ ಎಂಬುದು ಮೊದಲು ಅರಿಯುವದು, ಸ್ವ ಅಸ್ತಿತ್ವದ  ಸ್ವಯಂ ಅನ್ವೇಷಣೆಯಲ್ಲಿ ಅತ್ಯವಶ್ಯ.  ಸ್ವ ಅಸ್ತಿತ್ವವು "ನಾನು" ಎಂಬುದು ಅಲ್ಲ. "ನಾನು" ಎಂಬುದನ್ನು  ದೇಹವಿಲ್ಲದೆ ವೀಕ್ಷಿಸುವ ಆತ್ಮವೆ ಸ್ವ ಅಸ್ತಿತ್ವ.   ಆದ್ದರಿಂದ ದೇಹ ಮತ್ತು ಜಗತ್ತನ್ನು  ಆತ್ಮದೃಷ್ಟಿಯಿಂದ ಅವಲೋಕಿಸಿದರೆ ಮಾತ್ರ ಸತ್ಯ ಯಾವುದು ಹಾಗೂ ಅಸತ್ಯಯಾವುದು ಎಂಬ ಅರಿವಾಗುವದು.  ಆದ್ದರಿಂದ ಸತ್ಯದ ಅನ್ವೇಷಕರು  ಅತ್ಮದ್ರುಷ್ಟಿಯಿಂದ   ದೇಹ ಮತ್ತು ಜಗತ್ತನ್ನು ವೀಕ್ಷಿಸುವದನ್ನು ಕಲಿಯುವದು  ಅತ್ಯವಶ್ಯ.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ