ಈ ದೇಹವೇ ಸ್ವ ಅಸ್ತಿತ್ವವೆಂದು ತಿಳಿದಿರುವದರಿಂದ, ತಾನೂ ದೇಹವಲ್ಲ ವೆಂಬ ಅರಿವೂ ಇಲ್ಲದಾಗ, ಅಜ್ಞಾನವೆ ಪ್ರಧಾನವಾಗಿರುವ ಈ ಜಾಗೃತಾವಸ್ತೆಯಲ್ಲಿ ,ದೇಹವೇ" ನಾನು" ಎಂಬ ಬ್ರಮೆಯಲ್ಲಿ ಜಗತ್ತಿನ ಅನುಬವ ನಿಜವೆಂದು ತೋರುವದು. ಈ ವ್ಯಕ್ತಿಬ್ರಮೆಯಲ್ಲಿ ,ಜಗತ್ತಿನ ಬ್ರಮೆಯಲ್ಲಿ ನಿಜವೆಂಬಂತೆ ಬಾಸವಾಗುವದರಿಂದ , ಈ ದ್ವೈತ ಬಾವದ ಬ್ರಮೆಯ ಪರಿಮಿತಿಯಿಂದ ಹೊರಬರುವದು ಅಸಾದ್ಯ.
ವ್ಯಕ್ತಿ, ತನ್ನ ವ್ಯಕ್ತಿತ್ವದ ಪರಿಮಿತಿಯಲ್ಲಿಯೇ ವಿಚಾರ ಮಗ್ನವಾಗಿ ಲೌಕಿಕ ವ್ಯವಹಾರದಲ್ಲಿ ತೊಡಗಿರುವದರಿಂದ ಸ್ವ ಅಸ್ತಿತ್ವದ ಅರಿವಾಗಲು ಸಾದ್ಯವಾಗುವದಿಲ್ಲ. ಈ ಮೂರು ಅವಸ್ತೆಗಳು [ಜಾಗೃತ, ಸ್ವಪ್ನ, ಸುಷುಪ್ತಿ ] ಮಿತ್ಯ ವೆಂಬುದು ಕಚಿತವಾಗಾದೆ, ಮಿತ್ಯವನ್ನು ಸತ್ಯವೆಂದು ಅನುಬವಿಸುವದರಿಂದ ಪರಮ ಸತ್ಯದ ಜ್ಞಾನವಾಗುವದಿಲ್ಲ.
ಯಾವಾಗ ಮನಸ್ಸು ಏನೆಂಬುದು ಅರಿವಾಗಿ ,ಮನಸ್ಸಿನ ಮೂಲದ ಜ್ಞಾನ ವಾದಾಗ ಸತ್ಯ ಯಾವುದು, ಅಸತ್ಯ ಯಾವುದು ಎಂಬ ಅರಿವಾಗಿ ಆತ್ಮ ಜ್ಞಾನವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ