ಪರಮ ಸತ್ಯದ ಅನ್ವೇಷಣೆಯಲ್ಲಿರುವ ಅನ್ವೇಷಕರು , ಅನೇಕ ರೀತಿಯ ವಿಚಾರದಾರೆಗಳ್ಳನ್ನು ವಿಶ್ಲೇಷಿಸುತ್ತ , ಅನೇಕ ವಿಚಾರವಂತರೊಡನೆ ವಿಮರ್ಶಿಸುತ್ತ, ಎಲ್ಲಿ ಹುಡುಕಿ ತಡಕಾಡಿದರು ಪರಮ ಸತ್ಯದ ಅರಿವೂ ಹತ್ತಿರವೆನಿಸಿದರೂ ಸಹ ಅದು, ದೂರದ ಬೆಟ್ಟವಾಗಿಯೇ ಉಳಿಯುವದು.
ಪುಸ್ತಕಗಳ ವಾಚನದಿಂದ, ಧರ್ಮ ಗ್ರಂಥಗಳ ಪಾಂಡಿತ್ಯದಿಂದ , ಬುದ್ದಿಮತ್ತೆಯ ಪ್ರದಶನದಿಂದ, ಧರ್ಮಗಳು ಮುಕ್ತಿಗಾಗಿ ಸೂಚಿಸಿದ ಮಾರ್ಗ ಸೂಚಿಯ ಆಚರಣೆಗಳಿಂದ, ಧಾರ್ಮಿಕ ಮಡಿವಂತಿಕೆಯಿಂದ, ನಂಬಿಕೆಗಳನ್ನು ಪೂಜಿಸುವದರಿಂದ, ತೀರ್ಥ ಯಾತ್ರೆ ಕೈ ಕೊಳ್ಳುವದರಿಂದ, ಪವಿತ್ರ ನದಿಗಳಲ್ಲಿ ಮಿಯುವದರಿಂದ , ಜಪ ತಪಾದಿಗಳಲ್ಲಿ ತೊಡಗುವರಿಂದ, ತಂತ್ರದ ಸಂಬೋಗದಲ್ಲಿ ತೊಡಗುವದರಿಂದ ಹಾಗೂ ಗುರುಗಳ ಪಾದ ಪೂಜೆ ಮಾಡುವದರಿಂದ ಆತ್ಮ ಜ್ಞಾನ ಅಸಾದ್ಯ. ಈ ದೇಹಾದರಿತ ಸಂಸ್ಕಾರಗಳು ,ನಡುವಳಿಕೆಗಳು ಕೆಳ ಸ್ತರದ ತಿಳುವಳಿಕೆಯ ಜನರಿಗೆ ಮಾತ್ರ ಸೀಮಿತ , ಪರಮ ಸತ್ಯದ ಅನ್ವೇಷಣೆಯಲ್ಲಿ ಅವುಗಳಿಗೆ ಯಾವ ಬೆಲೆಯೂ ಇಲ್ಲ. ಈ ದೇಹದಾರಿತ ವಿಚಾರಗಳು ಕಲ್ಪನೆಗಳ ಆದರಿಸಿರುವದರಿಂದ ಅವುಗಳು ಸತ್ಯಕ್ಕೆ ದೂರವಾಗಿರುವವು.
ಸ್ವ ಅಸ್ತಿತ್ವ ದೇಹವಲ್ಲ ,ಸ್ವ ಅಸ್ತಿತ್ವ ಆತ್ಮವೆಂಬುದನ್ನು ಅರಿತು, ದೇಹದಾರಿತವಾದ ಎಲ್ಲವೂ ಮಾಯೆ ಎಂದು ಮನವರಿಕೆ ಮಾಡಿಕೊಂಡಾಗ , ಆತ್ಮವೇ ,ಸ್ವ ಅಸ್ತಿತ್ವವೆಂಬುದು ಅಂತರಾಳದಲ್ಲಿ ದ್ರುಡವಾದಾಗ, ಈ ದೇಹ ಮತ್ತು ಜಗತ್ತಿನ ಅನುಬವವೂ ಸಹ ಅರಿವಿನ ರೂಪದಲ್ಲಿರುವ ಆತ್ಮದಿಂದ ಉದ್ಬವವಾದ ಮರೀಚಿಕೆ ಎಂಬುದು ಅರಿವಾಗಿ, ಮನಸ್ಸು ಮತ್ತು ಆತ್ಮ ದಲ್ಲಿ ಬೇದವಿರದಾಗ ಅದ್ವೈತ ಸತ್ಯದ ಅರಿವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ