ದೇಹ ದೃಷ್ಠಿಯಲ್ಲಿ ಜಗತ್ತು ನಿಜವೆಂಬ ಅನಿಸಿಕೆ ಇರುವದು, ಆದರೇ ಆತ್ಮ ದೃಷ್ಟಿಯಲ್ಲಿ ಜಗತ್ತು ಒಂದು ಮರೀಚಿಕೆ ಮಾತ್ರ. ಪರಮ ಸತ್ಯವನ್ನು ದೇಹ ದೃಷ್ಟಿಯ ಆದಾರದ ಮೇಲೆ ನಿರ್ದರಿಸಲು ಸಾದ್ಯವಿಲ್ಲ. ಯಾಕೆಂದರೆ ದೇಹ ಮತ್ತು ಜಗತ್ತಿನ ಅರಿವಿರುವದು ದೇಹಕಲ್ಲ, ಅರಿವಿನ ರೂಪದಲ್ಲಿರುವ ಆತ್ಮಕ್ಕೆ. ಆದ್ದರಿಂದ ಆತ್ಮ ದೃಷ್ಟಿಯಲ್ಲಿ ದೇಹ ಮತ್ತು ಜಗತ್ತನ್ನು ಅವಲೋಕಿಸಿದಾಗ ಮಾತ್ರ ಆತ್ಮ ಜ್ಞಾನವಾಗುವದು.
ದೇಹಾದಾರಿತವಾದ ದಾರ್ಮಿಕ ನಡುವಳಿಕೆಗಳು,ನಂಬಿಕೆಗಳು,ಸಂಸ್ಕಾರಗಳು ಆತ್ಮ ಜ್ಞಾನಕ್ಕೆ ಪ್ರಮುಖವಾದ ಅಡ್ಡಗೋಡೆ. ಜನರು ತಲೆ ತಲಾಂತರವಾಗಿ ಬಂದಂತಹ ಈ ಸಂಸ್ಕಾರಗಳ ಸತ್ಯಾ ಸತ್ಯತೆಯನ್ನು ಪರೀಕ್ಷಿಸದೇ, ಈ ಕುರುಡ ನಂಬಿಕೆಗಳನೆಲ್ಲ, ನಂಬದಿರುವದರಿಂದ, ದೇವ ನಿಂದನೆಯಾಗಿ, ತಮ್ಮ ವಯಕ್ತಿಕ ಜೀವನದ ಮೇಲೆ ದೇವರ ಶಾಪ ತಟ್ಟುವದೆಂಬ ಬಯದಿಂದ, ತಮಗೆ ಹಿರಿಯರಿಂದ ಬಳುವಳಿಯಾಗಿ ಬಂದಂತಹ ಎಲ್ಲ ಸಂಸ್ಕಾರಗಳು, ದಾರ್ಮಿಕ ನಂಬಿಕೆಗಳು ಹಾಗೂ ನಡವಳಿಕೆಗಳು, ಪವಿತ್ರವಾದವುಗಳೆಂದು ದೃಡವಾಗಿ ನಂಬಿರುವದರಿಂದ, ಆತ್ಮ ಜ್ಞಾನ ಪ್ರಾಪ್ತಿಸಿ ಕೊಳ್ಳುವದು ಅಸಾದ್ಯ .
ಯಜುರ ವೇದದಲ್ಲಿ :-
ಯಾರು ನಿಸರ್ಗದಲ್ಲಿಯ ವಸ್ತುಗಳಾದ ವಾಯು,ಜಲ, ಸೂರ್ಯ, ಚಂದ್ರ,ಪ್ರಾಣಿ , ಅಗ್ನಿ , ಕಲ್ಲುಗಳನ್ನೂ ಹಾಗೂ ಅವುಗಳಿಂದ ತಯಾರಿಸಿದ ವಸ್ತು ಗಳನ್ನೂ ಪೂಜಿಸುತಾರೋ ,ಅಂತವರು ಅಂದಕಾರದಲ್ಲಿ[ಅಜ್ಞಾನ] ಮೂಳುಗುವರು.
[Yajurved 40:9]
ಎಂದು ಹೇಳಿರುವಾಗಲು ಸಹ, ವೇದಗಳಿಗೇ ವಿರುದ್ದವಾದ ನಂಬಿಕೆ, ನಡವಳಿಕೆ, ಸಂಸ್ಕಾರಗಳನ್ನು ಪವಿತ್ರವೆಂದು ನಂಬಿ ಪೂಜಿಸುವ ಈ ಜನ ಸಾಗರಕ್ಕೆ, ತಮ್ಮ ವಯಕ್ತಿಕ ಜೀವನದ ಆಗು ಹೋಗುಗಳಲ್ಲಿ ಮೂಳುಗಿರುವಾಗ, ಸತ್ಯವೇನೆಂದು ತಿಳಿಯುವ ಹಂಬಲ ವಿಲ್ಲದೆ, ಹುಟ್ಟು ,ಜೀವನ ,ಸಾವು ಹಾಗೂ ಜಗತ್ತಿನ ಅನುಬವಗಳು ನಿಜವೆಂದು ಅನುಬವಿಸಿ , ಅಜ್ಞಾನ ದಲ್ಲಿಯೇ ಜೀವನ ಸವೆಸುವ ಜನರಿಗೆ ,ಮನುಷ್ಯ ಜೀವನದ ಮೊದಲ ಗುರಿ ಆತ್ಮಜ್ಞಾನ ವೆಂಬುದು ಅರಿವಾಗುವದು ಈ ಅದುನಿಕ ಯಾಂತ್ರಿಕ ಜಗತ್ತಿನಲ್ಲಿ ಅಸಾದ್ಯ.
ಮಂಡುಕ ಉಪನಿಷ್ದಿನಲ್ಲಿ ಹೇಳಿರುವ ಹಾಗೇ:- ವೇದಗಳಲ್ಲಿ ಕಾಣಿಸಿದ ಎಲ್ಲ ಕರ್ಮಗಳು ಕೆಳಗಿನ ಸ್ತರದ ಜ್ಞಾನವಾಗಿವೆ. ಋಷಿಗಳು ಇವೆಲ್ಲವುಗಳನ್ನು ಬದಿಗೊತ್ತಿ, ಪರಮ ಸತ್ಯದ ಅನ್ವೇಷಣೆಯಲ್ಲಿ ತೊಡಗಿದರು. ಈ ಎಲ್ಲ ವೈದಿಕ ಕರ್ಮಗಳನ್ನೂ ಮಾಡುವದರಿಂದ, ಈ ಮಾಯೆಯಾದ, ಹುಟ್ಟು ,ಜೀವನ ಸಾವಿನ ಚಕ್ರವ್ಯೂಹದಿಂದ ಹೊರಬರುವದು ಅಸಾದ್ಯ.

[Mundaka Upanishad: The rituals and the sacrifices described in the Vedas deal with lower knowledge. The sages ignored these rituals and went in search of higher knowledge. ... Such rituals are unsafe rafts for crossing The sea of samsara, of birth and death. Doomed to shipwreck are those who try to cross The sea of samsara on these poor rafts. Ignorant of their own ignorance, yet wise In their own esteem, these deluded men Proud of their vain learning go round and round Like the blind led by the blind.]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ