ದೇಹವೇ ಸ್ವ ಅಸ್ತಿತ್ವವೆಂದು ತಿಳಿದಿರುವ ಕಾರಣ, ಜಗತ್ತಿನ ಅಸ್ತಿತ್ವ ನಿಜವೆಂದು ಬಾಸವಗುವದು. ಜಗತ್ತಿನ ಅಸ್ತಿತ್ವ ನಿಜವೆಂದು ತಿಳಿದಿರುವ ಕಾರಣ ಜಗತ್ತಿನಲ್ಲಿ ನೋಳಗಡೆ ಆಗುವ ಎಲ್ಲ ಅನುಬವಗಳು ನಿಜವೆಂದು ಬಾಸವಾಗುವ ಕಾರಣ, ವ್ಯಕ್ತಿ ಪ್ರಜ್ಞೆ ಬಲವಾಗಿ ಬೇರು ಬಿಟ್ಟಿರುವ ಕಾರಣ, ಬ್ರಮೆಯ ಬಂದನದಿಂದ ಮುಕ್ತಿಪಡೆಯುವದು, ಸ್ವ ಅಸ್ತಿತ್ವ ದೇಹವಲ್ಲವೆಂದು ಕಚಿತ ಪಡೆಸಿ ಕೊಂಡಾಗ ಮಾತ್ರ ಸಾದ್ಯ.
ಜಗದ ವ್ಯವಹಾರದಲ್ಲಿ ಮುಳುಗಿರುವ ವ್ಯಕ್ತಿಗೆ, ತನ್ನ ವ್ಯಕ್ತಿ ಜೀವನದ ಅನುಬವಗಳು ನಿಜವೆಂದು ಬಗೆದಿರುವ ಕಾರಣ, ಆಕಾರ, ಸಮಯ ಹಾಗೂ ಅಂತರದ ಪ್ರಜ್ಞೆಯಲ್ಲಿ, ಅಹಂಕಾರ ಪ್ರಾದಾನ್ಯ ವಾಗಿರುವದರಿಂದ, ತಾನೇ ಕರ್ತೃ ಎಂಬ ಬಾವನೆಯಿಂದ ಎಲ್ಲವನ್ನು ಅವಲೋಕಿಸುವದರಿಂದ ,ಈ ಮಾಯೆಯಾದ ಜಾಗೃತಾವಸ್ತೆಯನ್ನು ಮಿತ್ಯವೆಂದು ಸ್ವೀಕರಿಸುವದು ಅತ್ಯಂತ ಕಷ್ಟಕರ.
ವ್ಯಕ್ತಿಯಾಗಿ ಜಗತ್ತಿನಲ್ಲಿ ಅನುಬವಿಸಿದ ಏರುಪೇರುಗಳನ್ನು ಅನುಬವಿಸುತ್ತಾ,ಸಹಿಸುತ್ತಾ, ತಾನೇ ಕರ್ತೃ ಎಂದು ತಿಳಿದು ವ್ಯಕ್ತಿ ಜೀವನದಲ್ಲಿ ಆಗುವ ಎಲ್ಲ ಸುಖ, ದುಕಃಗಳ ಅನುಬವಗಳಿಗೆ ತಾನೆ ಹೊಣೆಯೆಂದು ತಿಳಿದುಕೊಂಡಿರುವದರಿಂದ ಈ ಹುಟ್ಟು,ಜೀವನ್ ಸಾವಿನ ಬ್ರಮೆಯ ಚಕ್ರದಿಂದ ಮುಕ್ತಿಪಡೆಯ ಬೇಕಾದರೆ,ಈ ದೇಹ ಸ್ವ ಅಸ್ತಿತ್ವವಲ್ಲ ವೆಂಬುದನ್ನು ದ್ರುಡಿಪಡೆಸಿಕೊಂಡಾಗ ಮಾತ್ರ ಸಾದ್ಯವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ