ಆತ್ಮ ಜ್ಞಾನದ ಮಾರ್ಗವು ಮೊದ ಮೊದಲಿಗೆ ಕಷ್ಟಕರವೆನಿಸಿದರೂ, ಆಳವಾದ ಅದ್ಯಯನದಲ್ಲಿ ತೊಡಗಿದಾಗ, ಎಲ್ಲ ಸಂಶಯಗಳು ನಿವಾರಣೆಯಾಗುತ್ತಾ ಸತ್ಯ ವೇನೆಂದು ತಿಳಿಯ ತೊಡಗುವದು. ಹಾಗೂ ಎಲ್ಲ ಅಡೆತಡೆಗಳು ಮಾಯವಾಗಿ, ಪರಮ ಸತ್ಯವನ್ನು ಅರಿಯುವದು ಸುಲಬವಾಗುವದು.
ದಾರ್ಮಿಕ ಸಂಸ್ಕಾರಗಳು,ನಂಬಿಕೆಗಳು ಶಾಸ್ತ್ರಗಳಲ್ಲಿ ನಂಬಿಕೆ ಪರಮ ಸತ್ಯದ ಮಾರ್ಗದಲ್ಲಿ ಮೂಲವಾಗಿರುವ ಅಡ್ಡಗೋಡೆ. ಯಾವಾಗ ದೇಹ ಸ್ವ ಅಸ್ತಿತ್ವ ಅಲ್ಲವೆಂದು ದ್ರುಡಿಕರಿಸಿಕೊಂಡಾಗ, ದೇಹದಾರಿತವಾಗಿ ಸತ್ಯವೆಂದು ಸ್ವೀಕರಿಸಿದ್ದ ಎಲ್ಲ ನಂಬಿಕೆಗಳು ಅಸತ್ಯವೆಂದು ಮನವರಿಕೆಯಾಗುವದು.
ಈ ದೇಹ, ಜಗತ್ತು ಹಾಗೂ ವ್ಯಕ್ತಿಯಾಗಿ ಕಂಡ, ನಂಬಿದ, ಅನುಬವಿಸಿದ ಎಲ್ಲ ಅನುಬವಗಳು ಮರೀಚಿಕೆ ಮಾತ್ರವೆಂದು ಅರಿವಾದಾಗ, ಎಲ್ಲವೂ ಅರಿವಿನಿಂದಲೇ ಸೃಷ್ಟಿಗೊಂಡು, ಅರಿವಿನಿಂದಲೇ ಅಸ್ತಿತ್ವಹೊಂದಿ, ಪುನಃ ಅರಿವಾಗಿ ಲೀನವಾಗುವ ಈ ಜಗತ್ತೇ ಈ ಮನಸ್ಸು ಎಂಬುದು ಮನವರಿಕೆಯಾಗುವದು . ಈ ಮನಸ್ಸಿನ ಮೂಲ ಸತ್ವವೇ ಅರಿವಿನ ರೂಪದಲ್ಲಿರುವ ಆತ್ಮ. ಈ ಸತ್ಯದ ಅರಿವೇ ಆತ್ಮಜ್ಞಾನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ