ಬುಧವಾರ, ಸೆಪ್ಟೆಂಬರ್ 15, 2010

ಜಗತ್ತಿನ ಅಸ್ತಿತ್ವ ಮನಸ್ಸಿನ ಮೂಲದ ಅನ್ವೇಷಣೆಯಿಂದ ಮಾತ್ರ ಸಾದ್ಯವೇ ಹೊರತು ಬೇರಿನ್ನಾವುದರಿಂದಲೂ ಅದನ್ನು ಅನ್ವೇಷಿಸುವದು ಅಸಾದ್ಯ.


ಅದುನಿಕ ವಿಜ್ಞಾನವೂ ಮಾನವ ಜೀವನಕ್ಕೆ ಅನುಕೂಲವಾಗುವಂತಹ  ಎಲ್ಲ ತಂತ್ರಜ್ಞಾನವನ್ನು ಒದಗಿಸಿ ಮಾನವ ಜೀವನ ಸುಗಮವಾಗಿಸಲು  ಎಲ್ಲ ಸಲಕರಣೆಗಳ್ಳನ್ನು ಸೃಷ್ಟಿಸಿ  ಮಾನವ ಕುಲಕೊಟಿಯನ್ನು ಅದುನಿಕತೆಯತ್ತ ಕೊಂಡೋಯುತ್ತೀದೆ. ಅದುನಿಕ  ವಿಜ್ಞಾನ  ಅನೇಕ ಧಾರ್ಮಿಕ ಮೂಡ ನಂಬಿಕೆಗಳಿಂದ ಹೊರಬರುವಂತೆ ಮಾಡಿದೆ. ಮಾನವ ಕುಲ ಕೋಟಿಗೆ ಅದುನಿಕ ವಿಜ್ಞಾನದ      ಕೊಡುಗೆ ಅಪಾರ. ಆದರೇ  ಸ್ವ ಅಸ್ತಿತ್ವದ  ಅನ್ವೇಷಣೆಯಲ್ಲಿ  ಅದುನಿಕ ವಿಜ್ಞಾನವು ದೇಹದಾರಿತವಾಗಿರುವರಿಂದ  ಅದು ಪರಮ ಸತ್ಯದ ಅನ್ವೇಷಣೆಯ ಸಾದನವಲ್ಲ.  

ಅದುನಿಕ ವಿಜ್ಞಾನ ಎಲ್ಲವನ್ನು ದೇಹದರಿತವಾಗಿ ವಿಶ್ಲೇಷಿಸಿ ದೇಹದರಿತವಾದ ಸಾಕ್ಷಗಳ   ಆದಾರವನ್ನಷ್ಟೇ  ಸತ್ಯವೆಂದು ಸ್ವೀಕರಿಸುವದರಿಂದ, ದೇಹಬ್ರಮೆಯಿಂದ  ಹೊರತಾಗಿರುವ ಪರಮ ಸತ್ಯದ ಅನ್ವೇಷಣೆ, ಅದುನಿಕ ವಿಜ್ಞಾನದಿಂದ ಅಸ್ಸಾದ್ಯ.  ಯಾಕೆಂದರೆ ಈ ಜಗತ್ತಿನ ಅಸ್ತಿತ್ವದ ಮೂಲದ ಹುಡುಕಾಟ ವಿಜ್ಞಾನದ ಪ್ರಯೋಗ ಶಾಲೆಯಲ್ಲಿ ಅಥವಾ  ಅದುನಿಕ ತಂತ್ರ ಜ್ಞಾನದಿಂದ ಅಸಾದ್ಯ. ಜಗತ್ತಿನ   ಅಸ್ತಿತ್ವ  ಮನಸ್ಸಿನ ಮೂಲದ ಅನ್ವೇಷಣೆಯಿಂದ   ಮಾತ್ರ ಸಾದ್ಯವೇ ಹೊರತು ಬೇರಿನ್ನಾವುದರಿಂದಲೂ ಅದನ್ನು    ಅನ್ವೇಷಿಸುವದು ಅಸಾದ್ಯ.               

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ