ಈ ಜಗತ್ತೇ ಮಾಯೆ ಯಾಗಿರುವಾಗ,ಈ ಜಗತ್ತಿನೋಳಗಿರುವ ವ್ಯಕ್ತಿಯ ಅನುಬವಗಳು ಕೂಡ ಮಾಯೆ ಎಂದು ತಿಳಿಯುವದು ಅಗತ್ಯ. ಎಲ್ಲಿಯವರೆಗೆ ದೇಹವೇ ಸ್ವ ಅಸ್ತಿತ್ವವೆಂದು ತಿಳಿದಿರುವೆವೋ ,ಅಲ್ಲಿಯವರೆಗೆ ಈ ದೇಹ ಮತ್ತು ಜಗತ್ತಿನ ಅನುಬವವನ್ನು ನಿಜವೆಂದು ಅನುಬವಿಸುವ ಕಾರಣ, ದ್ವೈತ ಬಾವನೆ ನಿಜವೆಂದು ತಿಳಿದಿರುವ ಕಾರಣ, ದೇಹ ದೃಷ್ಟಿ ಬಲವಾಗಿರುವ ಕಾರಣ, ಈ ಎಲ್ಲ ಸಂಶಯಗಳು ಹುಟ್ಟುವದು ಸಹಜ.
ಸ್ವ ಅನ್ವೇಷಣೆಯಲ್ಲಿ ದೇಹ ಸ್ವ ಅಸ್ತಿತ್ವವಲ್ಲ, ಅರಿವಿನ ರೂಪದಲ್ಲಿರುವ ಆತ್ಮವೂ ಸ್ವ ಅಸ್ತಿತ್ವವೆಂದು ಅರಿವಾದಾಗ, ದೇಹವಾಗಿ ಅನುಬವಿಸಿದ ಜಗತ್ತಿನ ಅನುಬವಗಳು ಮಿತ್ಯ ಮಾತ್ರ. ದೇಹ ಮತ್ತು ಜಗತ್ತು ಆತ್ಮದಿಂದ ಉದ್ಬವಿಸಿದ ಮರೀಚಿಕೆ ಮಾತ್ರ. ಯಾವಾಗ ದೇಹ ಸ್ವ ಅಸ್ತಿತ್ವವೆಂಬ ಅಜ್ಞಾನ, ಅತ್ಮಜ್ಞಾನದಿಂದ ನಾಶವಾದಾಗ, ಈ ಮಾಯೆಯ (ಜಗತ್ತಿನ ) ಅನುಬವದ ಮದ್ಯೆ, ಈ ಮಾಯೆಯೂ(ಜಗತ್ತು) ಅರಿವಿನ ರೂಪದಲ್ಲಿರುವ ಆತ್ಮದಿಂದ ಉದ್ಬವಿಸಿದ ಮರೀಚಿಕೆ ಮಾತ್ರ ಎಂಬ ಅರಿವಾಗುವದು . ಈ ಮರೀಚಿಕೆಯ ಮೂಲ ಸತ್ವವೇ ಆತ್ಮ . ಈ ಮನಸ್ಸಿನ ರೂಪದಲ್ಲಿರುವ ಜಗತ್ತು, ಆತ್ಮದಿಂದ ಉದ್ಬವವಾಗಿ, ಆತ್ಮದಿಂದ ಅಸ್ತಿತ್ವಹೊಂದಿ ಪುನಃ ಆತ್ಮವಾಗಿ ಲೀನವಾಗುವದು. ಆದ್ದರಿಂದ ಆತ್ಮದ ಹೊರತು,ಮೂರು ಅವಸ್ತೆ ಗಳಲ್ಲಾಗುವ ( ಜಾಗೃತ,ಸ್ವಪ್ನ,ಸುಷುಪ್ತಿ) ಅನುಬವಗಲೆಲ್ಲವು ಮಿತ್ಯ. ಈ ಮೂರು ಅವಸ್ತೆಗಳ ಬಂದು ಹೋಗುವಿಕೆಯ ಸಾಕ್ಷಿ ನಿರಾಕಾರವಾದ ಆತ್ಮ. ಈ ಸಾಕ್ಷಿಯೇ ಪರಮಾತ್ಮ.
ಯಾವಾಗ ದೇಹದೃಷ್ಟಿ ಬಿಟ್ಟು ಅತ್ಮದ್ರುಷ್ಟಿಯಿಂದ ಜಗತ್ತನ್ನು ಅವಲೋಕಿಸುವದನ್ನು ರೂಡಿಸಿಕೊಂಡಾಗ ಆತ್ಮ ಬಿಟ್ಟು ಬೇರಿನ್ನೇನು ಇಲ್ಲ ವೆಂಬ ಅರಿವೂ ಆಗಿ ಆತ್ಮ ಜ್ಞಾನ ಪ್ರಾಪ್ತವಾಗುವದು. ಆತ್ಮ ಬಿಟ್ಟು ಬೇರಿನ್ನೇನು ಇಲ್ಲ ವೆಂದಾಗ, ಆತ್ಮವೇ ಪರಮ ಸತ್ಯ. ಪರಮ ಸತ್ಯವೇ ಪರಮಾತ್ಮ .
ಇದನೆಲ್ಲ ಆಳವಾದ ಸ್ವಯಂ ಅನ್ವೇಷಣೆ ಯಿಂದ ದ್ರುಡಿಪಡೆಸಿಕೊಂಡಾಗ ಮಾತ್ರ, ಯೆಲ್ಲದರ್ ಸತ್ಯ ಸತ್ಯತೆ ತಂತಾನೇ ಪ್ರಕಟ ಗೋಳ್ಳುವದು. ಈದಕ್ಕೆ ಆಳವಾದ ಅದ್ಯಯನ್ ಅತ್ಯಗತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ