ಮಂಗಳವಾರ, ಆಗಸ್ಟ್ 31, 2010

ಆತ್ಮವೇ ಪರಮಸತ್ಯ . ಪರಮಸತ್ಯವೇ ಪರಮಾತ್ಮ




ಜಗತ್ತು ಒಂದು  ಮರೀಚಿಕೆ  ಹೇಗೆ ಎಂಬುದನ್ನು  ಅರಿಯುವದು ಅತ್ಯವಶ್ಯ. ಜಗತ್ತಿನ ಅನುಬವ ಒಂದು ಮರೀಚಿಕೆ ಎಂಬುದು  ಮನವರಿಕೆ ಆದಾಗ , ಜಗತಿನಲ್ಲಿ  ಹುಟ್ಟಿರುವ  ವ್ಯಕ್ತಿ ಮತ್ತು ವ್ಯಕ್ತಿಯ ವಯಕ್ತಿಕ  ಅನುಬವಗಳು, ಜಗತಿನ್ನಲ್ಲಿರುವ  ಎಲ್ಲ ಜೀವ ಜಂತುಗಳು , ಜಡ ವಸ್ತುಗಳು ಸಹ ಮರೀಚಿಕೆ ಮಾತ್ರ.
  ಮರೀಚಿಕೆಯ ಜಗತ್ತಿನಲ್ಲಿ ದೇವ ಮಾನವರು ನಡೆಸುವ ಪವಾಡಗಳು ಸಹ ಮಿತ್ಯಸಂಬೋಗದಿಂದ ಆತ್ಮ ಜ್ಞಾನ ವನ್ನು ಪ್ರಾಪ್ತಿಸಿಕೊಳ್ಳುವ  ಯೋಗಿಗಳಿಗೆಸ್ವ ಅಸ್ತಿತ್ವ ದೇಹವಲ್ಲವೆಂದ ಮೇಲೆ, ದೇಹವೇ ಸ್ವ ಅಸ್ತಿತ್ವವೆಂದು  ನಂಬಿ   ತಂತ್ರದ  ಸಂಬೋಗದಲ್ಲಿ ತೊಡಗಿದರೆಲಿಂಗವಿಲ್ಲದ ನಿರಾಕಾರವಾದ  ಆತ್ಮದ ಜ್ಞಾನ ಆಗಲು ಹೇಗೆ ಸಾದ್ಯ
ಉಸಿರಿನಗತಿಯನ್ನು ನಿಯಂತ್ರಣದಿಂದ  ಆತ್ಮ ಜ್ಞಾನ  ಪ್ರಾಪ್ತಿಯಗುವದಿಲ್ಲ. ದೇಹ ಸ್ವ ಅಸ್ತಿತ್ವ ಅಲ್ಲವೆಂದ ಮೇಲೆ , ದೇಹವಾಗಿ ಕೈಕೊಳ್ಳುವ ಯಾವ ಸಾದನೆಯಿಂದಲೂ ಆತ್ಮ ಜ್ಞಾನ  ಅಸಾದ್ಯ .  ಸತ್ಸಂಗವೆಂದು ದೇಹದಾರಿತ ದೇವರುಗಳ ಕತೆಗಳನ್ನು ಅಲಿಸುವದರಿಂದ ಪರಮ ಸತ್ಯದ ಜ್ಞಾನ ಅಸಾದ್ಯ. ತನ್ನ ಸ್ವ ಅಸ್ತಿತ್ವವೇ  ದೇಹವಲ್ಲ ವೆಂದ ಮೇಲೆ,  ದೇಹವೆ ಸ್ವ ಅಸ್ತಿತ್ವ ವೆಂದು ನಂಬಿ, ದೇಹದಾರಿತವಾದ  ದರ್ಮ,ದೇವರಲ್ಲಿ ಶ್ರುದೆ ಬಕ್ತಿ ,  ದೇವರ ಆರಾದನೇ,  ಸಾಂಪ್ರ ದಾಯೀಕ   ಸಂಸ್ಕಾರಗಳಿಂದ  ಈ ಮಾಯೆಯಿಂದ ಮುಕ್ತಿ ಅಸ್ಸಾದ್ಯ. 
ದೇಹವೇ  ಸ್ವ ಅಸ್ತಿತ್ವ ವೆಂದ ಮೇಲೆ ದೇಹವಾಗಿ ಮಾಡುವ ಕರ್ಮದ ಲೆಕ್ಕಾಚಾರಕ್ಕೆ ಯಾವ ಬೆಲೆಯೂ ಇಲ್ಲ.  ದೇಹವೆ ಸ್ವ  ಅಸ್ತಿತ್ವವೆಂದು ನಂಬಿ ಪಾಪ, ಪುಣ್ಯ, ಸ್ವರ್ಗ, ನರಕಗಳ ಸಿದ್ದಾಂತಗಳ್ಳನ್ನು ನಿಜವೆಂದು ನಂಬಿದವರಿಗೆ,  ಈ ಜನನ,ಜೀವನ್ ಹಾಗೂ ಮರಣದ ಚಕ್ರದಿಂದ ಮುಕ್ತಿ ಪಡೆಯುವದು ಅಸಾದ್ಯ. 
ಈ ದೇಹ  ಸ್ವ ಅಸ್ತಿತ್ವವೆಂದು ತಿಳಿದವರಿಗೆ ಜನನ,ಮರಣ,ಪೂನರ್ಜನ್ಮ ಸಿದ್ದಾಂತ ಗಳನ್ನೂ ನಿಜವೆಂದು ನಂಬಿ ವಾದ,ವಿವಾದಗಳಲ್ಲಿ ತೊಡಗುವವರಿಗೆ ಈ ದೇಹ ಬ್ರಮೆಯಿಂದ ಮುಕ್ತಿ ಪಡೆಯದೇ ಪರಮ ಸತ್ಯದ ಅರಿವೂ ಆಗುವದು ಅಸಾದ್ಯ. 
ಧರ್ಮ, ಜಾತಿ  ಗಳಿಂದ  ಗುರುತಿಸಿಕೊಂಡವರಿಗೆ,   ದೇಹ ಸ್ವ ಅಸ್ತಿತ್ವವಲ್ಲ, ಸ್ವ ಅಸ್ತಿತ್ವವಾದ  ಅರಿವಿನ ರೂಪದಲ್ಲಿರುವ ಆತ್ಮಕ್ಕೆ, ಯಾವ ಧರ್ಮ, ಜಾತಿಗಳ ಬಂದನವಿಲ್ಲವೆಂದು ತಿಳಿಯುವದು ಅಸಾದ್ಯ.  ವೇದಗಳೇ ಸಾರುವ ಹಾಗೇ ದರ್ಮ ಗ್ರಂಥಗಳ ಪಾಂಡಿತ್ಯದಿಂದ    ಆತ್ಮಜ್ಞಾನ ಅಸಾದ್ಯ.       
 ವಾಸ್ತವದ ಜಗತ್ತಿನಲ್ಲಿ ಜೀವನ್ ನಡೆಸುವ ಅನುಬವವೇ ನಿಜವೆಂದು ಬಾವಿಸಿದವರು, ಈ ದೇಹ ಸ್ವ ಅಸ್ತಿತ್ವವೆಂದು ಸಿದ್ದ ಪಡೆಸಿದಾಗ ಮಾತ್ರ ,ಈ ಜಗತ್ತಿನ ಅಸ್ತಿತ್ವ ನಿಜವೆಂದು ಸ್ವೀಕರಿಸಬಹುದು. ಈ ಜಗತಿಲ್ಲದೆ ದೇಹದ ಅಸ್ತಿತ್ವವಿಲ್ಲ, ಈ ದೇಹವಿಲ್ಲದೆ ಜಗತೀನ ಅಸ್ತಿತ್ವವಿಲ್ಲ. ಈ ದೇಹ ಮತ್ತು ಜಗತ್ತಿನ ಅಸ್ತಿತ್ವದ ಅರಿವೂ ಇರುವದು ದೇಹಕಲ್ಲ, ನಿರ್ಗುಣ, ನಿರಕರವಾದ ಆತ್ಮಕ್ಕೆ ಎಂಬುದನ್ನು   ಸತ್ಯದ ಸ್ವ ಅನ್ವೇಷಣೆಯಿಂದ ಕಚಿತ   ಪಡೆಸಿಕೊಂಡಾಗ ಮಾತ್ರ ಸತ್ಯ ಯಾವುದು ಹಾಗೂ ಅಸತ್ಯ ಯಾವುದು ಎಂಬುದರ ಅರಿವಾಗಿ,ಅಸತ್ಯವೂ(ಮನಸ್ಸು)   ಕರಗಿ ಪರಮ ಸತ್ಯವಾದ(ಆತ್ಮ)  ಅಖಂಡತ್ವದ ಅನಂತ ಇರುವೆಕೆಯ   ಜ್ಞಾನ ಪ್ರಾಪ್ತವಾಗುವದು.  ಆದ್ದರಿಂದ  ಆತ್ಮವೇ ಪರಮಸತ್ಯ . ಪರಮಸತ್ಯವೇ ಪರಮಾತ್ಮ.             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ