ಭಾನುವಾರ, ಆಗಸ್ಟ್ 1, 2010

ದೇಹ, ದೇಹವಾಗಿ ಉಳಿಯದೆ ,ಜಗತ್ತು ,ಜಗತ್ತಾಗಿ ಉಳಿಯದೆ, ಈ ಮನಸ್ಸು , ನಿರ್ಗುಣ,ನಿರಾಕಾರವಾದ ಆತ್ಮ ವಾಗಿ , ತನ್ನ ಸ್ವ ಸ್ವಬಾವವಾದ ಅನಂತ ಇರುವೆಕೆಯಲ್ಲಿ ಸ್ಥಿರಗೊಳ್ಳುವದು.



ಸ್ವಯಂ ಅನ್ವೇಷಣೆಯಲ್ಲಿ ಆಳವಾಗಿ ತೊಡಗಿದಾಗ ,ಸ್ವಯಂ ವಿಚಾರಣೆಯಲ್ಲಿ ಅಜ್ಞಾನ ಕರಗುತ್ತಾ ಎಲ್ಲ ಸಂದೇಹಗಳಿಗೆ ,  ತಂತಾನೆ ಉತ್ತರಗಳು ಸಿಕ್ಕು ಸಂಶಯಗಳೆಲ್ಲ ನಿವಾರಣೆಯಾಗಿ, ಆತ್ಮಜ್ಞಾನ ಆಗುತ್ತದೆ.  ಯಾವಾಗ ಅರಿವಿನಲ್ಲಿರುವ  ದೇಹ ಮತ್ತು ಜಗತ್ತಿನ ಬ್ರಮೆ, ಆತ್ಮ ಜ್ಞಾನದಿಂದ,  ಬ್ರಮೆ ಕರಗಿ ಬ್ರಮ್ಹವಾಗುತ್ತದೆಯೋ, ಆವಾಗ ದೇಹ, ದೇಹವಾಗಿ ಉಳಿಯದೆ ,ಜಗತ್ತು ,ಜಗತ್ತಾಗಿ ಉಳಿಯದೆ, ಈ ಮನಸ್ಸು ,  ನಿರ್ಗುಣ,ನಿರಾಕಾರವಾದ ಆತ್ಮ ವಾಗಿ , ತನ್ನ ಸ್ವ ಸ್ವಬಾವವಾದ ಅನಂತ ಇರುವೆಕೆಯಲ್ಲಿ ಸ್ಥಿರಗೊಳ್ಳುವದು.   

ಆಕಾರ, ಸಮಯ, ಅಂತರದ ಜ್ಞಾನವಿರುವದು ಬ್ರಮೆಯಲ್ಲಿ ಮಾತ್ರ. ಅದ್ದರಿಂದ ಆಕಾರ,ಸಮಯ,ಅಂತರ ಬ್ರಮೆ ಮಾತ್ರ. ಪರಮ ಸತ್ಯವೂ, ಆಕಾರ,ಸಮಯ,ಅಂತರಗಳ  ಬ್ರಮೆಯಿಂದ ಹೊರತಾಗಿದೆ. ಆದ್ದರಿಂದ ,   ಆಕಾರ, ಸಮಯ, ಅಂತರದ  ಆದಾರಿತ್ ಸಿದ್ದಾಂತಗಳು ,ಬ್ರಹ್ಮಾದಾರಿತ್ ಸಿದ್ದಾಂತಗಳು.   ಬ್ರಮಾದರಿತ್  ಸಿದ್ದಾಂತಗಳ   ಆದಾರದ ಮೇಲೆ ಪರಮ  ಸತ್ಯವನ್ನು ದ್ರುಡಿಕರಿಸಲು  ಸಾದ್ಯವಿಲ್ಲ.      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ