ಮಂಗಳವಾರ, ಆಗಸ್ಟ್ 31, 2010

ಆದ್ಯಾತ್ಮ ಅತ್ಮಾದಾರಿತವಾದದ್ದು. ಆದ್ದರಿಂದ ಆತ್ಮದ ಬಗ್ಗೆ ಆಧ್ಯಯನ ಮಾಡುವದು ಮಾತ್ರ ಆದ್ಯಾತ್ಮ.



ದೇಹ  ಮತ್ತು ಜಗತ್ತಿಗೆ ಬೇರೆ ಬೇರೆಯಾದ ಅಸ್ತಿತ್ವವಿಲ್ಲ. ಆದರೇ ವ್ಯಕ್ತಿ ತಾನೂ ಈ ಜಗತ್ತಿನಲ್ಲಿ ಹುಟ್ಟಿರುವೆ ಈ ಜಗತ್ತಿನಲ್ಲಿ    ಜೀವನ್ ನಡೆಸುತ್ತಿರುವೆ, ಈ ಜಗತ್ತಿನಲ್ಲಿ ಒಂದು ದಿನ ಸಾಯುವೆಯೆಂಬ ದೃಡವಾದ ನಂಬಿಕೆ  ಹೊಂದಿರುವ ಕಾರಣ, ದೇಹ ದೃಷ್ಟಿಯಿಂದ  ಜಗತ್ತನ್ನು  ಅವಲೋಕಿಸುವ ಕಾರಣ, ತನ್ನ ವಯಕ್ತಿಕ  ಅಸ್ತಿತ್ವ ಜಗತ್ತಿನಿಂದ ಹೊರತಾಗೀದೆ  ಎಂದು ತಿಳಿದಿರುವ  ಕಾರಣ,  ಪರಮ ಸತ್ಯದ ಅರಿವಾಗುವದು ಅಸಾದ್ಯ. 

ದೇಹ, ಅಹಂಕಾರ ಮತ್ತು ಜಗತ್ತು   ಮನಸ್ಸಿನ ರೂಪದಲ್ಲಿ    ಒಟ್ಟಿಗೆ ಪ್ರಕಟವಾಗಿ, ಒಟ್ಟಿಗೆ ಲೀನವಾಗುವವು.  ಮನಸ್ಸಿದ್ದಾಗ  ಮಾತ್ರ ದೇಹ, ಅಹಂಕಾರ ಮತ್ತು ಜಗತ್ತು ಗಳ  ಅನುಬವಗಳು ಇರುವದು. ಮನಸ್ಸು ಇಲ್ಲದಾಗ   ಈ ದೇಹ, ಅಹಂಕಾರ ಮತ್ತು ಜಗತ್ತು ಗಳ ಅನುಬವಗಳು ಇರುವದಿಲ್ಲ. ಆದ್ದರಿಂದ  ಈ ಈ ದೇಹ,ಅಹಂಕಾರ ಮತ್ತು  ಜಗತ್ತಿನ ಅಸ್ತಿತ್ವ ಮನಸನ್ನು  ಅವಲಂಬಿಸಿದೆ. ಆದ್ದರಿಂದ  ಪರಮ ಸತ್ಯದ  ಅನ್ವೇಷಣೆಯಲ್ಲಿ ಮನಸ್ಸು  ಏನೆಂಬುದನ್ನು ಅರಿಯುವದು  ಅತಿ ಮುಕ್ಯ.
ಪರಮ ಸತ್ಯದ ಜ್ಞಾನ ಅಥವಾ ಆತ್ಮಜ್ಞಾನವನ್ನು   ದೇವರ ಬಕ್ತಿಯಿಂದ ,ಧಾರ್ಮಿಕ  ಸಂಪ್ರದಾಯಗಳ   ನಡವಳಿಕೆಗಳಿಂದ, ಗುರು ಸೇವೆಯಿಂದ, ದರ್ಮ ಗ್ರಂಥಗಳ  ಆಧ್ಯಯನದಿಂದ ಪ್ರಾಣಾಯಾಮ, ಯೋಗ, ಹಾಗೂ  ಕ್ರಿಯಾ ಯೋಗಗಳಿಂದ  ಪ್ರಾಪ್ತಿಸಿಕೊಳ್ಳುವದು ಅಸಾದ್ಯ. ಯಾಕೆಂದರೆ ಅವುಗಳೆಲ್ಲವೂ ದೇಹವೇ ಸ್ವ ಅಸ್ತಿತ್ವವೆಂಬ ಆದಾರದ ಮೇಲೆ ಸೃಷ್ಟಿ ಯಾದಂತಹುಗಳು.

ಆದ್ಯಾತ್ಮಕ್ಕು ಹಾಗೂ ಧಾರ್ಮಿಕತೆಗೂ ಮತ್ತು  ಯೋಗಕ್ಕೂ  ಯಾವ ಸಂಬಂದವು ಇಲ್ಲ. ಯಾಕೆಂದರೆ ಧಾರ್ಮಿಕತೆ  ಮತ್ತು  ಯೋಗ ದೇಹಾದಾರಿತವದ್ದು.  ಆದ್ಯಾತ್ಮ ಅತ್ಮಾದಾರಿತವಾದದ್ದು. ಆದ್ದರಿಂದ  ಆತ್ಮದ ಬಗ್ಗೆ ಆಧ್ಯಯನ ಮಾಡುವದು  ಮಾತ್ರ ಆದ್ಯಾತ್ಮ.

ಆದರಿಂದ ಯಾವಾಗ ಆದ್ಯಾತ್ಮವನ್ನು ,ಧರ್ಮ ಮತ್ತು ಯೋಗಗಳಿಂದ ಬೆರ್ಪಡಿಸಿದಾಗ ಮಾತ್ರ ಪರಮ ಸತ್ಯದ ಮಾರ್ಗ ಸುಗಮಗೋಳ್ಳುವದು.          
 
Enhanced by Zemanta

1 ಕಾಮೆಂಟ್‌: