ಸೋಮವಾರ, ಆಗಸ್ಟ್ 23, 2010

ಈ ಹುಟ್ಟು,ಜೀವನ ಮತ್ತು ಸಾವಿನ ಚಕ್ರದಿಂದ ಹೊರಬರಲು ತನ್ನ ಮುಂದಿರುವ ಈ ಜಗತ್ತಿನ ಮೂಲದ ಬಗ್ಗೆ ಅರಿಯುವದು ಅತ್ಯಗತ್ಯವಾಗಿದೆ.


ಸತ್ಯದ ಅನ್ವೇಷಣೆಯ ಗುರಿ ಆತ್ಮ ಜ್ಞಾನ ಪ್ರಾಪ್ತಿಸಿಕೊಳ್ಳುವದು. ಆತ್ಮದ ಹೊರತು ಇನೊಂದಿಲ್ಲ .ಮನಸ್ಸಿನ ರೂಪದಲ್ಲಿರುವ ಈ   ಜಗತ್ತು  ಆತ್ಮದಿಂದ ಉದ್ಬವವಾಗಿ, ಆತ್ಮದಿಂದ ಅಸ್ತಿತ್ವ ಹೊಂದಿ , ಪುನಃ ಆತ್ಮವಾಗಿ  ಲೀನಗೋಳ್ಳುವದು. ಆದರೇ ಅಜ್ಞಾನದಿಂದ ಈ ಜಗತ್ತನ್ನು ನಿಜವೆಂದು ಅನುಬವಿಸುತ್ತಿರುವ ಈ ಜಗತ್ತಿನಲ್ಲಿ ಹುಟ್ಟಿ,ಜೀವನ,ಮತ್ತು ಮರಣ ಹೊಂದುವೆವು ಎಂಬ ಬ್ರಮೆಯಲ್ಲಿರುವ ವ್ಯಕ್ತಿಗೆ, ತಾನೂ ಹುಟ್ಟಿರುವ ಈ ಜಗತ್ತು  ಸಹ ಬ್ರಮೆಯೆಂಬ ಪರಿಕಲ್ಪನೆ ಕೂಡ ಇರದ ರೀತಿಯಲ್ಲಿ ಮಾಯೆ ಆವರಿಸಿಕೊಂಡಿರುವದರಿಂದ, ತನ್ನ ದೇಹವೇ ಸ್ವ ಅಸ್ತಿತ್ವವೆಂದು ದೇಹ ದೃಷ್ಟಿಯೀಂದ  ಎಲ್ಲವನ್ನು ಅವಲೋಕಿಸುವಾಗ ತಾನೂ ಮತ್ತು ತನ್ನ ಜಗತ್ತಿನ ಅಸ್ತಿತ್ವ ಅಜ್ಞಾನದಿಂದ ಉದ್ಬವಿಸಿದೆಯೆಂಬ ಅರಿವಿರದೆ , ಈ ಅಜ್ಞಾನದಿಂದ ಉದ್ಬವವಾದ ದೇಹ ಮತ್ತು ಜಗತ್ತಿನ ಅನುಬವವನ್ನು ನಿಜವೆಂದು ಬಗೆದಿರುವದರಿಂದ ಪರಮ ಸತ್ಯದ ಅನ್ವೇಷಣೆ ಕಷ್ಟ ಸಾಧ್ಯವಾಗಿದೆ.    ಈ ಹುಟ್ಟು,ಜೀವನ ಮತ್ತು   ಸಾವಿನ ಚಕ್ರದಿಂದ ಹೊರಬರಲು ತನ್ನ ಮುಂದಿರುವ ಈ  ಜಗತ್ತಿನ  ಮೂಲದ ಬಗ್ಗೆ ಅರಿಯುವದು ಅತ್ಯಗತ್ಯವಾಗಿದೆ.  

ಯಲ್ಲಿಯವರೆಗೆ  ಮನಸ್ಸೇನೆಂಬುದನ್ನು ಅರಿಯಲಾಗುವದಿಲ್ಲವೋ ,ಅಲ್ಲಿಯವರೆಗೆ ಈ ಅಜ್ಞಾನದಿಂದ ಮುಕ್ತಿ ಅಸಾದ್ಯ.   ಆದ್ದರಿಂದ ,ಮನಸ್ಸು ಏನೆಂಬುದನ್ನು ಮೊದಲು ಅರಿತು, ಆಮೇಲೆ ಮನದ ಮೂಲದ ಅನ್ವೇಷಣೆ ಕೈಕೊಂಡಾಗ ಸತ್ಯವೇನೆಂದು ಪ್ರಕಟವಾಗತೊಡಗುವದು.   

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ