ಅರಿವಿನಿಂದಲೇ ಉದ್ಬವವಾಗಿ, ಅರಿವಿನಿಂದಲೇ ಅಸ್ತಿತ್ವಹೊಂದಿರುವ ಮನಸ್ಸು ಪೂನಃ ಅರಿವಾಗಿಯೇ ಲೀನವಾಗುವ ಅರಿವಿಗೇ ,ಜಾಗೃತಾವಸ್ತೆಯಲ್ಲಿ[ಅಜ್ಞಾನದಲ್ಲಿ] ತನ್ನ ಸ್ವ ಸ್ವರೂಪದ ಅರಿವಾದಾಗ, ಈ ಆಕಾರ, ಸಮಯ,ಅಂತರದ ಬ್ರಮೆ ಮಾಯವಾದಾಗ,ಉಳಿಯುವುದೇ ಪರಮ ಸತ್ಯದ ಸ್ವ ಸ್ವರೂಪ. ಈ ಸ್ವ ಸ್ವರೂಪವೇ ಆತ್ಮ. ಆತ್ಮವೇ ಬ್ರಹ್ಮ. ಇದನ್ನು ಮನದಿಂದ ಗ್ರಹಿಸಿ ,ಸ್ವ ಸ್ವರೂಪದಲ್ಲಿ ಸ್ಥಿರಗೊಂಡ ವ್ಯಕ್ತಿ ಬ್ರಮೆಯಲ್ಲಿರುವ ಅರಿವೇ, ಮುಕ್ತ .
ಆದ್ದರಿಂದ, ದರ್ಮ ದೇವರುಗಳು ಮಾನವ ಸಮಾಜದ ಒಳಿತಿಗಾಗಿ ಸೃಷ್ಟಿ ಯಾಗಿರುವವೇ ಹೊರತು, ಸತ್ಯದ ಅನ್ವೇಷಣೆಯಲ್ಲಿ ,ಅವುಗಳ ಪಾಲನೆ ಅರ್ಹತೆಯಲ್ಲ. ಪರಮ ಸತ್ಯದ ಅನ್ವೇಷಣೆ ಒಂದು ವ್ಯಯಕ್ತಿಕವಾದ ವಿಚಾರ. ಪರಮ ಸತ್ಯದ ಜ್ಞಾನವೂ, ಪ್ರವಚನಗಳನ್ನು ಕೇಳುವದರಿಂದಾಗಲಿ, ಅಥವಾ ವಾದ ವಿವಾದ ಗಳಲ್ಲಿ ತೊಡಗುವದರಿಂದಾಗಲಿ ಅಥವಾ ಗ್ರಂಥಗಳ ಪಾಂಡಿತ್ಯದ ಪ್ರದರ್ಶನದಿಂದಾಗಲಿ ಪ್ರಾಪ್ತಿಸಿಕೊಳ್ಳುವದು ಅಸಾದ್ಯ. ಲವುಕಿಕ ಸತ್ಯ , ದಾರ್ಮಿಕ್ ಸತ್ಯಗಳು ದೇಹ ಆದಾರಿತ ಸತ್ಯಗಳು. ಆದರಿಂದ ಅವುಗಳು ಪರಮ ಸತ್ಯವಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ