ಸತ್ಯದ ಅನ್ವೇಷಣೆಗೆ ಅಲೆದಾಡ ಬೇಕಿಲ್ಲ. ದರ್ಮಕಾರ್ಯ,ಯೋಗ ಸಾದನೆ, ಜಪ ತಪಾದಿಗಳು, ದರ್ಮಗ್ರಂಥಗಳ ಪಾಂಡಿತ್ಯ, ಗುರುವೀನ ಸೇವೆ, ಕಲ್ಪಿತ್ ದೇವರ ಆರಾದನೆಗಳು ಲವುಕಿಕ ಜೀವನದಲ್ಲಿ ಮಾತ್ರ ಅವುಗಳಿಗೆ ಬೆಲಇದೆಯೇ ಹೊರತು, ಆತ್ಮ ಜ್ಞಾನಕ್ಕೆ ಆವುಗಳೂ ಅರ್ಹತೆಗಳಲ್ಲ ಮತ್ತು ಅವುಗಳ ಅವಶ್ಯಕತೆಯು ಇರುವದಿಲ್ಲ.
ಕರ್ಮ ಸಿದ್ದಾಂತ ದೇಹದಾರಿತವಾಗಿರುವದರಿಂದ, ಕಲ್ಪನಾ ಮತ್ತು ಉಹಾ ಆದಾರಿತ್ ಸಿದ್ದಾಂತಗಳು. ಯಾವಾಗ ಈ ದೇಹ ಸ್ವ ಅಸ್ತಿತ್ವವಲ್ಲವೆಂದು ಅರಿವಾಗುವದೋ , ಆವಾಗ ಈ ದೇಹ ಆದಾರಿತ್ ಸಿದ್ದಾಂಥಗಳಿಗೆ ಯಾವ ಬೆಲೆಯೂ ಇಲ್ಲ. ಸ್ವ ಅಸ್ತಿತ್ವವೂ ನಿರ್ಗುಣ ,ನಿರಾಕರವಾದ ಅರಿವಿನ ರೂಪದಲ್ಲಿರುವ ಆತ್ಮವಾಗಿರುವದರಿಂದ, ಆತ್ಮ ದೃಷ್ಟಿಯಲ್ಲಿ ಈ ಜನನ, ಜೀವನ,ಮರಣ ಮತ್ತು ಜಗತ್ತಿನ ಅನುಬವಗಳು ಮರೀಚಿಕೆ ಮಾತ್ರ. ಜನನ,ಜೀವನ್ ಮರಣ ದೇಹಕ್ಕೆ ಮಾತ್ರ ,ಅತ್ಮಕಲ್ಲ. ಅದ್ದರಿಂದ ಸತ್ಯ ಯಾವುದೆಂಬ ಅರಿವೂ ಸ್ವ ಅಸ್ತಿತ್ವದ ಅನ್ವೇಷಣೆಯಲ್ಲಿ ತೊಡಗಿದವರಿಗೆ ಮಾತ್ರ ಸಾದ್ಯವಾಗುವದು.
ಜಗವನ್ನು ಅನುಬವಿಸುವ ವ್ಯಕ್ತಿಯಾಗಿ ಹುಟ್ಟಿರುವ ಬ್ರಮೆ ಹೊಂದಿರುವ ಅರಿವಿಗೇ ,ತನ್ನ ಸ್ವ ಸ್ವಬವಾದ ಅರಿವೂ ಬ್ರಮೆಯ ಮದ್ಯದಲ್ಲಿಯೆ ಆಗುವ ಜ್ಞಾನವೇ, ಆತ್ಮ ಜ್ಞಾನ ಅಥವಾ ಬ್ರಹ್ಮ ಜ್ಞಾನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ