ಮಂಗಳವಾರ, ಆಗಸ್ಟ್ 24, 2010

ಹುಟ್ಟಿನ ಆದಾರದ ಅನುವಂಶಿಕವಾಗಿ ಬಂದಂತಹ ಸಂಸ್ಕಾರಗಳು ಹಾಗೂ ದಾರ್ಮಿಕ ಕಟ್ಟು ಪಾಡುಗಳಿಂದ ಮುಕ್ತಿ ಪಡೆದಾಗ ಮಾತ್ರ ಪರಮ ಸತ್ಯದ ಅನ್ವೇಷಣೆಯ ಮಾರ್ಗ ಸುಗಮವಾಗುವದು.



ದೇಹಬ್ರಮೆಯಲ್ಲಿ ಇರುವ ನಾವೆಲ್ಲರುಗಳು ಹುಟ್ಟಿನ ಆದಾರದ ಮೇಲೆ ನಮೆಲ್ಲ ನಂಬಿಕೆಗಳನ್ನು ದ್ರುಡಿಕರಿಸುವದರಿಂದ ಪರಮ ಸತ್ಯದ ಅರಿವಾಗುವದು ಸಾಧ್ಯವಾಗದ ಮಾತು.   ಹುಟ್ಟಿನ ಆದಾರ ಅಸತ್ಯವನ್ನು ದ್ರುಡಿಕರಿಸುವ ಆದಾರ. ಹುಟ್ಟಿನ ಆದಾರವೇ  ವಿಚಾರದ ಉಗಮ  ಸ್ಥಾನ.  

ಆತ್ಮ ಸ್ವ ಅಸ್ತಿತ್ವವೆಂದ ಮೇಲೆ ,ನಿರಾಕಾರವಾದವಾದ  ಆತ್ಮಕ್ಕೆ  ಹುಟ್ಟು ಸಾವು ಇರದಾಗ, ದೇಹವೇ ಸ್ವ ಅಸ್ತಿತ್ವವೆಂಬ ಅಜ್ಞಾನದಿಂದ, ದೇಹ ದೃಷ್ಟಿಯಿಂದ  ಎಲ್ಲವನ್ನು ಅವಲೋಕಿಸುವವರೆಗೆ ಪರಮ ಸತ್ಯದ ಅರಿವೂ    ಆಗುವದು   ಅಸಾದ್ಯ. ಆದರಿಂದ ದೇಹ ದೃಷ್ಟಿಯಿಂದ ಎಲ್ಲವನ್ನು ಅವಲೋಕಿಸುವದನ್ನು  ಬಿಟ್ಟು ಆತ್ಮ ದೃಷ್ಟಿಯಿಂದ ಎಲ್ಲವನ್ನು ಅವಲೋಕಿಸುವ ಕಲೆಯನ್ನು ಅರಗಿಸಿಕೊಂಡಾಗ, ಪರಮ ಸತ್ಯವು ಪ್ರಕಟ ಗೊಳ್ಳಲು   ಆರಂಬಿಸುತ್ತದೆ. ಆದ್ದರಿಂದ ಹುಟ್ಟಿನ ಆದಾರದ ಅನುವಂಶಿಕವಾಗಿ ಬಂದಂತಹ ಸಂಸ್ಕಾರಗಳು ಹಾಗೂ  ದಾರ್ಮಿಕ ಕಟ್ಟು ಪಾಡುಗಳಿಂದ ಮುಕ್ತಿ ಪಡೆದಾಗ ಮಾತ್ರ, ಪರಮ ಸತ್ಯದ ಅನ್ವೇಷಣೆಯ ಮಾರ್ಗ ಸುಗಮವಾಗುವದು.  

                     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ