ನಿಜವಾದ ಅಸ್ತಿತ್ವ ದೇಹವಲ್ಲ ,ನಿಜವಾದ ಅಸ್ತಿತ್ವ ಅರಿವಿನ ರೂಪದಲ್ಲಿರುವ ಆತ್ಮ. ಅದ್ದರಿಂದ ಆತ್ಮ ದೃಷ್ಟಿಯಿಂದ ಎಲ್ಲವನು ಅವಲೋಕಿಸಿ ಸತ್ಯವೇನೆಂದು ಅರಿತುಕೊಲ್ಲುವದು ಅತ್ಯವಶ್ಯಕವಾಗಿದೆ. ದೇಹದೃಷ್ಟಿ ಯಿಂದ ಎಲ್ಲವನ್ನು ಅವಲೋಕಿಸಿದರೆ ಕಲ್ಪನೆ ಅಥವಾ ಊಹೆಯ ಲೋಕದಲ್ಲಿ ಮುಳುಗಿ ದೇಹ ಬ್ರಮೆ ಮತ್ತಷ್ಟು ಸ್ಥಿರವಾಗುತ್ತದೆ. ಅದ್ದರಿಂದ ದೇಹಬ್ರಮೆಯಿಂದ ಅನುಬವವಾದಂತಹ ಎಲ್ಲ ಅನುಬವಗಳು ಮಿತ್ಯವೆಂದು ಅರಿಯುವದು ಅತ್ಯಗತ್ಯ. ಈ ಮೂರು ಅವಸ್ತೆಗಳ ಅನುಬವದ ಬ್ರಮೆ, ಆತ್ಮ ದಿಂದ ಉದ್ಬವಿಸಿ, ಮತ್ತೆ ಆತ್ಮವಾಗಿ ಲೀನ ವಾಗುವವು. ಅದ್ದರಿಂದ ಯಾವದೇ ಅನುಬವ ಮರೀಚಿಕೆ ಮಾತ್ರ. ಅವಕ್ಕೆ ಸತ್ಯದ ಪರಿಮಿತಿಯಲ್ಲಿ ಅಸ್ತಿತ್ವವಿಲ್ಲ.
"ನಾನು" ಎಂಬುದು ಒಂದು ಮ್ರುಗಜಲ್ . "ನಾನು" ಎಂಬುದು ಈದ್ದಾಗ ಮಾತ್ರ ಅಜ್ಞಾನ ವಿರುತ್ತದೆ .ನಾನು" ಎಂಬುದು ಈದ್ದಾಗ ಮಾತ್ರ ಬ್ರಮೆ ಇರುತ್ತದೆ . ನಾನು" ಎಂಬುದು ಈದ್ದಾಗ ಮಾತ್ರ ದ್ವೈಥ್ ಬಾವ ವಿರುತ್ತದೆ . ನಾನು" ಎಂಬುದು ಈದ್ದಾಗ ಮಾತ್ರ ಮನಸ್ಸು ಇರುತ್ತದೆ ." ನಾನು" ಎಂಬುದು ಇದ್ದಾಗ ಮಾತ್ರ ಜಗತ್ತು ಇರುತ್ತದೆ. "ನಾನು" ಎಂಬುದು ಇದ್ದಾಗ ಮಾತ್ರ ದೇಹ ಇರುತ್ತದೆ." ನಾನು" ಎಂಬುದು ಇದ್ದಾಗ ಮಾತ್ರ ಜಾಗೃತ ಹಾಗೂ ಸ್ವಪ್ನ ದ ಅನುಬವ ಆಗುತ್ತದೆ. ಅದ್ದರಿಂದ "ನಾನು" ಎಂಬುದು ದೇಹಕ್ಕೆ ಮಾತ್ರ ಸೀಮೀಥವಾಗಿರದೆ, ಇಡೀ ಜಾಗೃತಾವಸ್ತೆಯನ್ನು ಪ್ರತಿನಿದಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ