ಹೇಗೆ, ಹಿಮ ಅಥವಾ ಮೋಡ ನೀರಿನಿಂದ ಉದ್ಬವವಾಗಿದೆಯೋ ,ನೀರಿಲ್ಲದೆ ಅವುಗಳ ಅಸ್ತಿತ್ವ ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ ಈ ಮೂರು ಅವಸ್ತೆಗಳು ಅರಿವಿನಿಂದ ಉದ್ಬವವಾಗಿ ,ಅರಿವಿನ ಆದಾರದಿಂದಲೇ ಅಸ್ತಿತ್ವಹೊಂದಿ , ಮತ್ತೆ ಅರಿವಾಗಿ ,ಅರಿವಿನಲ್ಲಿಯೇ ಲೀನವಾಗುವವು. ಆದರಿಂದ ಅರಿವಿಲ್ಲದೆ ಈ ಮೂರು ಅವಸ್ತೆಗಳಿಗೆ ಸ್ವ ಅಸ್ತಿತ್ವವಿಲ್ಲ. ಆದರಿಂದ ಪರಾವಲಂಬಿಯದಂತ್ ಈ ಮೂರು ಅವಸ್ತೆಗಳಿಗೆ, ಅರಿವಿಲ್ಲದೆ ಸ್ವತಂತ್ರವಾದ್ ಅಸ್ತಿತ್ವವಿಲ್ಲ. ಆದರಿಂದ ಅರಿವಿನ ರೂಪದಲ್ಲಿರುವ ಆತ್ಮವೇ ಪರಮ ಸತ್ಯ. ಆತ್ಮದ ಹೊರತು ಇನೆಲ್ಲವುಗಳು ಮಿತ್ಯ ಮಾತ್ರ.
ಆತ್ಮವೇ ನಿತ್ಯ,ನಿರ್ವಿಕಾರ್ ಹಾಗೂ ಶಾಶ್ವತ ವಾದದ್ದು . ಅಶಾಶ್ವತವಾದ ಈ ಮೂರು ಅವಸ್ತೆಗಳ ಅನುಬವಗಳು ಪ್ರಕಟ ಮತ್ತು ಅದೃಶ್ಯ ವಾಗುವ ಅರಿವೂ ಇರುವದು ಆತ್ಮಕ್ಕೆ, ಈ ದೇಹಕಲ್ಲ. ಆದರಿಂದ ಈ ಮೂರು ಅವಸ್ತೆಗಳ್ಳನ್ನು, ದೇಹ ದೃಷ್ಟಿಯಿಂದ ಅವಲೋಕಿಸದೇ, ಆತ್ಮ ದೃಷ್ಟಿಯಿಂದ ಅವಲೋಕಿಸುವದರಿಂದ, ಆತ್ಮ ಜ್ಞಾನದ ಮಾರ್ಗ ಸುಗಮವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ