ತಾನೂ ಈ ಜಗತ್ತಿನಲ್ಲಿ ಹುಟ್ಟಿರುವೆ,ಈ ಜಗತ್ತಿನಲ್ಲಿ ಜೀವನ್ ನಡೆಸುತ್ತಿರುವೆ, ಈ ಜಗತ್ತಿನಲ್ಲಿಯೇ ಸಾಯುವದು ಕಚಿತವೆಂದು ತಿಳಿದಿರುವ ವ್ಯಕ್ತಿಗೆ, ಈ ಮನಸ್ಸಿನ ರೂಪದಲ್ಲಿರುವ ಜಗತ್ತು, ಒಂದು ಬ್ರಮೆ ಮಾತ್ರವೆಂದು ಅರಿವಿರದೇ,ಅಸತ್ಯವನ್ನು ನಿಜವೆಂದು ತಿಳಿದು ಅದನ್ನೇ ಪ್ರತಿಪಾದಿಸುತ್ತ ,ಅದರ ಅಸ್ತಿತ್ವದ ಬಗ್ಗೆ ಉಹಾದಾರಿತ ಸಿದ್ದಾಂತಗಳನ್ನೂ ಸೃಷ್ಟಿಸುತ್ತಾ ಹೊರಟಿರುವದರಿಂದ, ಪರಮ ಸತ್ಯದ ಅರಿವೂ ಅಸಾದ್ಯ.
ವ್ಯಕ್ತಿ ಹಾಗೂ ಈ ಜಗತ್ತಿನ ಅಸ್ತಿತ್ವ ಬ್ರಮೆಯಲ್ಲಿ ಮಾತ್ರ ಲಬ್ಯ. ತಾನೂ ವ್ಯಕ್ತಿ ಎಂದು ಬಗೆದು ಕಲ್ಪಿತ ದೇವರಲ್ಲಿ ನಂಬಿಕೆಯಿಟ್ಟು ,ದಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗೆ, ಸ್ವ ಅಸ್ತಿತ್ವ ದೇಹವಲ್ಲ ಎಂಬ ಅರಿವೂ ಇಲ್ಲದ ಕಾರಣ, ಜಗತ್ತಿನ ಮತ್ತು ಈ ದೇಹದ ಅನುಬವನ್ನು ನಿಜವೆಂದು ತಿಳಿದಿರುವ ಕಾರಣ, ಹಾಗೂ ಪ್ರತಿಯೊಂದು ವಿಚಾರವನ್ನು, ದೇಹ ದೃಷ್ಟಿಯಲ್ಲಿ ಅವಲೋಕಿಸುವ ಕಾರಣ ಈ "ನಾನು" ಎಂಬ ಬ್ರಮೆಯ ಚಕ್ರವ್ಯುಹದಿಂದ ಮುಕ್ತಿ ಪಡೆಯುವದು ಅಸಾದ್ಯ. ಆದ್ದರಿಂದ ಈ "ನಾನು " ಎಂಬುದು ಸ್ವ ಅಸ್ತಿತ್ವವಲ್ಲವೆಂದು ಅರಿವಾಗುವವರೆಗೆ, ಸತ್ಯ ಯಾವುದೆಂದು ಅರಿವಾಗುವದು ಅಸಾದ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ