ಶುಕ್ರವಾರ, ಆಗಸ್ಟ್ 6, 2010

ಅಜ್ಞಾನದ ಕಕ್ಷೆಯಲ್ಲಿ ಸತ್ಯದ ಅಸತ್ಯದ ವಿವೇಚನೆ ಮಾಡುವ ಮುನ್ನ ಸ್ವ ಅಸ್ತಿತ್ವ ದೇಹವಲ್ಲ ಎಂಬುದನ್ನು ದ್ರುಡಿಕರಿಸಿಕೊಳ್ಳುವದು ಅತ್ಯ ಅವಶ್ಯ.


ಆಕಾರದ  ಪರಿಮಿತಿಯಲ್ಲಿ ಅರಿವೂ ,ತಾನೂ ವ್ಯಕ್ತಿಯೆಂದು ವಿಚಾರ ಮಾಡುವದರಿಂದ, ದೇಹ ಆದಾರಿತ ಬುದ್ದಿಜೀವಿಯಾಗಿ, ಈ ದೇಹ ಬ್ರಮೆಯ ಬುದ್ದಿಯೇ ಸರ್ವಕ್ಕು ಮಾಪಕವೆಂದು ದೃಡವಾಗಿ ನಂಬಿರುವದರಿಂದ, ಬುದ್ಧಿಯಿಂದ್ ಕೇಳಿ,ತಿಳಿದು,ಓಧಿ, ಅಬ್ಯಾಸಿಸಿ ಮತ್ತು ಅನುಬವಿಸಿ ತನ್ನ ವ್ಯಕ್ತಿಗತ ಜೀವನದ ಅನುಬವಗಳ್ಳನ್ನು ಆದಾರವಾಗಿಟ್ಟುಕೊಂಡು ವ್ಯಕ್ತಿಯ ದೃಷ್ಟಿಕೋನದಿಂದ ಎಲ್ಲವನ್ನು ಅವಲೋಕಿಸುವದರಿಂದ ಈ  ಅಜ್ಞಾನದ  ಕಕ್ಷೆಯಲ್ಲಿ ಸತ್ಯದ ಅಸತ್ಯದ   ವಿವೇಚನೆ ಮಾಡುವ ಮುನ್ನ ಸ್ವ ಅಸ್ತಿತ್ವ ದೇಹವಲ್ಲ ಎಂಬುದನ್ನು ದ್ರುಡಿಕರಿಸಿಕೊಳ್ಳುವದು  ಅತ್ಯ ಅವಶ್ಯ.           

ಎಲ್ಲ  ಅನಿಸಿಕೆ, ಅನುಬವಗಳು,ವಿಚಾರಗಳು,ಶಬ್ದಗಳು  ದೇಹ ಆದಾರಿತವಾಗಿರುವದರಿಂದ, ದೇಹಬ್ರಮೆಯ ಆದಾರವಿಲ್ಲದೆ ಅವುಗಳ ಉದ್ಬವ ಅಸಾದ್ಯ.  ದೇಹಬ್ರಮೆಯು, ಜಾಗೃತಾವಸ್ತೆಯೆ ಅನುಬವ  ಅಥವಾ ಮನಸ್ಸಿನ ಆದಾರವಿಲ್ಲದೆ ಅಸ್ತಿತ್ವದಲ್ಲಿರುವದು  ಅಸಾದ್ಯ.   ಆದ್ದರಿಂದ ಮನಸ್ಸಿನ ಮೂಲವನ್ನರಿಸಿ ಹೋದಾಗ ಆಕರ ಆದಾರಿತ   ಅನುಬವ ಗಳ ಬ್ರಮೆ ಕರಗಿ ಬ್ರಹ್ಮ ವಾಗುವದು.  

 ಬ್ರಮೆಯಲ್ಲಿರುವ ಅರಿವು   ತನ್ನ ಮೂಲ ಸ್ವರೂಪದ ಜ್ಞಾನದಿಂದ ಬ್ರಮೆಯಿಂದ   ನಗ್ನ ಗೊಂಡಾಗ , ತನ್ನ ನಿರ್ಗುಣ,ನಿರಾದಾರವಾದ  ಆತ್ಮವಾಗಿ ಸ್ಥಿತ್ ಪ್ರಜ್ಞಾವಸ್ತೆಯಲ್ಲಿ   ಸ್ಥಿರವಾಗುವದು .           

1 ಕಾಮೆಂಟ್‌: