ಈ ಮೂರು ಅವಸ್ತೆಗಳ ಬ್ರಮೆಯ ಅಮಲಿನಿಂದ ಹೊರಬರಲು ಸ್ವ ಅಸ್ತಿತ್ವದ ಜ್ಞಾನವಾದಾಗ ಮಾತ್ರ ಸಾದ್ಯ. ದ್ಹೇಹಂ ,ನಾಹಂ, ಕೊಹಂ, ಸೋಹಂ ಇದು ವೇದಗಳ ಸಾರ. ಆತ್ಮ ದೃಷ್ಟಿಯಲ್ಲಿ ಇದರ ಅರ್ಥ - ದೇಹ ಸ್ವ ಅಸ್ತಿತ್ವ ಅಲ್ಲ ,ಸ್ವ ಅಸ್ತಿತ್ವ ದೇಹ ಅಲ್ಲದ ಅದು --ಅಂದರೆ ಆತ್ಮ .
ದೇಹ ಸ್ವ ಅಸ್ತಿತ್ವ ಅಲ್ಲ ಎಂದ ಮೇಲೆ , ದೇಹ ಅದಾರಿಥವಾದ ದರ್ಮ, ದೇವರ ನಂಬಿಕೆ, ದರ್ಮ ಶಾಸ್ತ್ರಗಳು, ಕರ್ಮ ಸಿದ್ದಾಂತಗಳು, ಪುನರ್ಜನ್ಮವಾದಗಳು, ಸ್ವರ್ಗ, ನರಕದ ನಂಬಿಕೆಗಳು ಹಾಗೂ ಯೋಗ ,ತಂತ್ರ,ಮಂತ್ರ,ಯಂತ್ರ ಗಳಿಗೇ, ಆತ್ಮ ದೃಷ್ಟಿಯಲ್ಲಿ ಯಾವ ಬೆಲೆಯೂ ಇಲ್ಲ. ಅವುಗಳೆಲ್ಲವೂ ದೇಹ ಬ್ರಮೆಯಯಲ್ಲಿ ಕಲ್ಪಿಸಿ ಜೀವನದಲ್ಲಿ ಅಳವಡಿಸಿ ಕೊಂಡತಹ ಸಂಸ್ಕಾರಗಳು. ಈ ಸಂಸ್ಕಾರಗಳು ತಲೆ ತಲೆಮಾರಿನಿಂದ ಬಳುವಳಿಯಾಗಿ ಬಂದುದರಿಂದ , ಅವುಗಳನ್ನು ಪ್ರತಿ ತಲೆಮಾರಿನವರು ತಮ್ಮ ಪೀಳಿಗೆಗೆ ಹೇರುತ್ತಾ ಹೋಗಿರುವದರಿಂದ ಅವುಗಳು ರಕ್ತಗತವಾಗಿ ಹೋಗಿವೆ. ಆದರೇ ,ಈ ಕುರುಡು ನಂಬಿಕೆಯ ಸತ್ಯ , ಮಿತ್ಯಕ್ಕೆ ಅಂದರೆ ಮನಸ್ಸಿಗೆ ಮಾತ್ರ ಸೀಮೀತ ವಾಗಿದೆ. ಈ ಸಂಸ್ಕಾರಗಳ ಬಗ್ಗೆ ಬಾವಾತಿರೇಕ ಹೊಂದಿದವರಿಗೆ, ಪರಮ ಸತ್ಯದ ಅರಿವೂ ಅಸಾದ್ಯ. ಆದ್ದರಿಂದ ಸಂಸ್ಕಾರವಂಥರಿಗೆ ಸತ್ಯದ ಅನ್ವೇಷಣೆ ಸೂಕ್ತವಲ್ಲ ,ಯಾಕೆಂದರೆ ಅವರುಗಳು , ಸಂಸ್ಕಾರದಿಂದ ಬಂದಂತಹ ಸತ್ಯವನ್ನು ಪರಮ ಸತ್ಯವೆಂದು ಸ್ವೀಕರಸಿ ಆಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ