ಜಗದ ಜೀವನದಲ್ಲಿ ಅನುಬವಕ್ಕೆ ಬರುವ ಎಲ್ಲ ಅನುಬವಗಳು, ಸ್ವಯಂ ಅನ್ವೇಷಣೆಯಲ್ಲಿ ಅವುಗಳ ಅಸ್ತಿತ್ವ ನಿಜವೆಂದು ಸಮರ್ಥಿಸಿಕೊಳ್ಳಲು ಆದಾರ ರಹಿತವಾಗಿ ಹೋಗುವದರಿಂದ ದೇಹಾದಾರಿತವಾದ ಜಗತ್ತಿನ ಅನುಬವ ಮಿತ್ಯವೆಂದು ಸಾಬಿತಾಗುವದು. ದೇಹವೇ ಸ್ವ ಅಸಿತ್ವವೆಂದು ಬ್ರಮೆಯಿದ್ದಾಗ ಜಗತ್ತಿನ ಅಸ್ತಿತ್ವ ನಿಜವೆಂಬ ಬ್ರಾಂತಿ ಇರುವದು. ಈ ದೇಹ ಬ್ರಮೆ ಇದ್ದಾಗ ,ಈ ಅರಿವೂ, ತಾನು ವ್ಯಕ್ತಿ, ಈ ಜಗತ್ತು ತನ್ನಿದ ಹೊರತಾಗಿದೆ, ತಾನೂ ಈ ಜಗತ್ತಿನಲ್ಲಿ ಹುಟ್ಟಿರುವೆ, ಈ ಜಗತ್ತು ತನ್ನ ಮೊದಲೇ ಅಸಿತ್ವದಲ್ಲಿತ್ತು ಎಂದು ತಿಳಿದಿರುವದರಿಂದ ಅಜ್ಞಾನದ ಬೇರು ಆಳವಾಗಿ ಪಸರಿಸುವ ಕಾರಣ ,ಅಜ್ಞಾನವನ್ನು ಬೇರು ಸಹಿತವಾಗಿ ಕಿತ್ತಲೂ ಆಳವಾದ ಅದ್ಯಯನ ಅತ್ಯ ಅವಶ್ಯವಾಗಿದೆ.
ಸ್ವಪ್ನದಲ್ಲಿ ಸ್ವಪ್ನದ ದೇಹ,ಅಹಂಕಾರ ,ಜಗತ್ತು ಎಲ್ಲವೂ ಕೂಡಿ ಪ್ರಕಟ ಗೊಂಡು , ಎಲ್ಲವೂ ಕೂಡಿ ಲೀನವಾಗುವದರಿಂದ, ಸ್ವಪ್ನದ ದೇಹ,ಅಹಂಕಾರ ಮತ್ತು ಜಗತ್ತಿಗೆ ಬೇರೆ ಬೇರೆಯಾದ ಅಸ್ತಿತ್ವವಿಲ್ಲ. ಅವೆಲ್ಲವುಗಳು ಸ್ವಪ್ನದ ಅನುಬವದೊಳಗೆ ಅಸ್ತಿತ್ವ ಹೊಂದಿರುತ್ತವೆ. ಸ್ವಪ್ನದ ಅನುಬವದೊಂದಿಗೆ ಅವುಗಳು ಮರೆಯಾಗುತ್ತವೆ.
ಅದೇ ರೀತಿಯಲ್ಲಿ ಜಾಗೃತಾವಸ್ತೆಯಲ್ಲಿ, ಜಾಗೃತದ , ದೇಹ,ಅಹಂಕಾರ ,ಜಗತ್ತು ಎಲ್ಲವೂ ಕೂಡಿ ಪ್ರಕಟ ಗೊಂಡು , ಎಲ್ಲವೂ ಕೂಡಿ ಮರೆಯಾಗುವದರಿಂದ, ಜಾಗೃತದ ದೇಹ, ಅಹಂಕಾರ ಮತ್ತು ಜಗತ್ತಿಗೆ ಬೇರೆ ಬೇರೆಯಾದ ಅಸ್ತಿತ್ವವಿಲ್ಲ. ಅವೆಲ್ಲವುಗಳು ಜಾಗೃತದ ಅನುಬವದೊಳಗೆ ಅಸ್ತಿತ್ವ ಹೊಂದಿರುತ್ತವೆ. ಜಾಗೃತದ ಅನುಬವದೊಂದಿಗೆ ಅವುಗಳು ಮರೆಯಾಗುತ್ತವೆ. ಆದ್ದರಿಂದ ಈ ಮೂರು ಅವಸ್ತೆಗಳ ಬಗ್ಗೆ ಆಳವಾದ ಅದ್ಯಯನ್ ಮಾಡುವದು ಅತ್ಯವಶ್ಯವಾಗಿದೆ. ದೇಹವು ಸ್ವ ಅಸ್ತಿತ್ವ ಅಲ್ಲವೆಂದ ಮೇಲೆ, ಈ ಮೂರು ಅವಸ್ತೆಗಳ ಸಾಕ್ಷಿ ದೇಹ ಅಲ್ಲ ದಿದ್ದರೆ ದೇಹ ರಹಿತವಾದ ಆ ಸಾಕ್ಷಿ ಯಾವುದು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ