ಅರಿವಿನ ಹೊರತು ಎಲ್ಲವೂ ಅಸತ್ಯವಾದುದು. ಅರಿವೂ ಮೂರು ಅವಸ್ತೆಗಳ ಅನುಬವದಲ್ಲಿ ಎಲ್ಲೆಲಿಯು ಮತ್ತು ಎಲ್ಲದರಲ್ಲಿಯೂ ಆವರಿಸಿರುವದು. ಈ ಅರಿವಿನಿಂದ ಉದ್ಬವಗೊಂಡತಹ ಮನಸ್ಸು, ಜಾಗ್ರತ ಅಥವಾ ಸ್ವಪ್ನದ ಅನುಬವವಾಗಿ ಪ್ರಕಟಗೊಂಡು ಸುಶುಪ್ತಿಯಲ್ಲಿ ಪುನಃ ಅರಿವಾಗಿ ತನ್ನ ಸ್ವ ಸ್ವರೂಪದಲ್ಲಿ ಲೀನವಾದಾಗ, ಜನನ, ಜೀವನ್, ಮರಣ ಹಾಗೂ ಜಗತ್ತಿನ ಅನುಬವಗಳು, ಅರಿವಿನಲ್ಲಿ ಅಖಂಡತ್ವದಲ್ಲಿ ಒಂದಾದಾಗ , ಅರಿವಿನ ರೂಪದಲ್ಲಿರುವ ಆತ್ಮದ ಅಸ್ತಿತ್ವದ ಹೊರತು, ಬೇರಾವುದರ ಅಸಿತ್ವವು ಮರೀಚಿಕೆ ಮಾತ್ರ. ಆದ್ದರಿಂದ ಆತ್ಮವಂದೇ ಪರಮ ಸತ್ಯವಾದುದು, ಆತ್ಮದ ಹೊರತು ಇನೆಲ್ಲವೂ ಮಿತ್ಯವಾದುದು. ಆತ್ಮ ದೃಷ್ಟಿಯಲ್ಲಿ ಮೂರು ಅವಸ್ತೆಗಳು ಮಿತ್ಯ ಮಾತ್ರ. ಮೂರು ಅವಸ್ತೆಗಳ ಬಂದು ಹೋಗುವಿಕೆಯ ಅರಿವಿರುವದು ದೇಹಕಲ್ಲ ಅರಿವಿನ ರೂಪದಲ್ಲಿರುವ ಆತ್ಮಕ್ಕೆ.
ಜಗತ್ತಿನ ಅಸ್ತಿತ್ವವು ಆತ್ಮವನ್ನು ಅವಲಂಬಿಸಿದೆ. ಮನುಷ್ಯನ ಹಾಗೂ ಜೀವರಾಶಿಯ ಅಸ್ತಿತ್ವವು ಜಗತ್ತನ್ನು ಅವಲಂಬಿಸಿದೆ. ಜಗತ್ತು, ಜಾಗೃತ ಅಥವಾ ಸ್ವಪ್ನದ ರೂಪದಲ್ಲಿ ಪ್ರಕಟಗೊಂಡು ಸುಶುಪ್ತಿಯಲ್ಲಿ ತನ್ನ ಸ್ವ ಸ್ವರೂಪವಾದ ಆತ್ಮವಾಗಿ ಅಖಂಡತ್ವ ದಲ್ಲಿ ಲೀನವಾಗುವದು. ಅಜ್ಞಾನದಿಂದ ಉದ್ಬವವಾದ ಜಗತ್ತಿನಲ್ಲಿರುವ ಮನುಷ್ಯನಿಗೆ, ತನ್ನ ಮತ್ತು ಈ ಜಗತ್ತಿನ ಅಸ್ತಿತ್ವವು ನಿಜವೆಂಬ ಅಜ್ಞಾನ ಆವರಿಸಿರುವದರಿಂದ, ಎಲ್ಲವನ್ನು ದೇಹ ದೃಷ್ಟಿಯಲ್ಲಿ ತೂಲನೆ ಮಾಡುವದರಿಂದ ಪರಮ ಸತ್ಯದ ಜ್ಞಾನವಾಗುವದು ಅಸಾದ್ಯ. ಆದ್ದರಿಂದ ತನ್ನ ಸ್ವ ಅಸ್ತಿತ್ವವು ದೇಹವಲ್ಲ, ಅರಿವಿನ ರೂಪದಲ್ಲಿರುವ ಆತ್ಮ ವೆಂಬುದನ್ನು ಅರಿಯುವದು ಪರಮ ಸತ್ಯದ ಅನ್ವೇಷಣೆಯಲ್ಲಿ ಅತ್ಯ ಅಗತ್ಯ .
ಉತ್ತಮವಾದ ತತ್ವ-ಸಿದ್ಧಾಂತ
ಪ್ರತ್ಯುತ್ತರಅಳಿಸಿ