ಸ್ವ ಅಸ್ತಿತ್ವವು, ದೇಹವಲ್ಲ, ಮನಸ್ಸಲ್ಲ ,ಜಗತಲ್ಲ, ಆದರೆ ಇವುಗಳ ಅಸ್ತಿತ್ವಕ್ಕೆ ಕಾರಣಿಬೂತ್ ವಾಗಿರುವಂತ್ ಸಾಕ್ಷಿಯಾಗಿರುವ ನಿರ್ಗುಣ, ನಿರಾಕರವಾದ ಆತ್ಮ . ಆತ್ಮ ದಿಂದಲೇ ಉದ್ಬವಿಸಿ, ಅತ್ಮದಿಂದಲೇ ತನ್ನ ಅಸ್ತಿತ್ವಹೊಂದಿ , ಪುನಃ ಆತ್ಮ ವಾಗಿ ಲೀನವಾಗುವ ಈ ಬ್ರಮೆಯ ಅವಸ್ತೆಗಳ, ಈ ರಹಸ್ಯವನ್ನು, ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೇ ಅರಿವಾದಾಗ, ಈ ಮೂರು ಅವಸ್ತೆಗಳ ಬ್ರಮೆ ಬಿಟ್ಟು ಬ್ರಹ್ಮ ಜ್ಞಾನವಾಗುವದು.
ಸ್ವಅಸ್ತಿತ್ವದ ಜ್ಞಾನವೇ ಆತ್ಮ ಜ್ಞಾನ. ಆತ್ಮವೇ ಬ್ರಮೆಯ ಮೂಲಾಧಾರ. ಆತ್ಮ ವಿಲ್ಲದೆ ಬ್ರಮೆಗೆ ಅಸ್ತಿತ್ವವಿಲ್ಲ. ಆದರೆ ಬ್ರಮೆ ಇಲ್ಲಧೆಯು ಸಹ ನಿರಾವಲಂಬಿಯಾದಂಥ ಆತ್ಮ ,ಶಾಶ್ವತವಾಗಿ ತನ್ನ ಸ್ವ ಅಸ್ತಿತ್ವವನ್ನು ಹೊಂದಿರುತದ್ದೆ. ಅದ್ದರಿಂದ ಬ್ರಮೆಯು, ಆಕಾರ ,ಸಮಯ ಹಾಗೂ ಅಂತರದ ಕಕ್ಷೆಗೇ ಮಾತ್ರ ಸೀಮೀತವಾಗಿರುತ್ತದೆ, ಆದ್ದರಿಂದ, ಆಕಾರ,ಸಮಯ ಹಾಗೂ ಅಂತರದ ಜ್ಞಾನ, ಬ್ರಮೆ ಮಾತ್ರ. ಆದ್ದರಿಂದ ದೇಹಾಅದಾರಿತವಾದ ಯೋಗ, ದರ್ಮ ದೇವರುಗಳು ಸತ್ಯದ ಅನ್ವೇಷಣೆಗೆ ಸಾದನ ಗಳಲ್ಲ. ಅವುಗಳು ಸುಳ್ಳಿನ ಅಸ್ತಿತ್ವವನ್ನು[ದೇಹ + ಜಗತ್ತು ] ಸತ್ಯವೆಂದು ನಂಬಿ, ಸುಳ್ಳಿನ ಅಸ್ತಿತ್ವದ ಮೇಲೆ ಕಲ್ಪಿಸಿದ ಸಿದ್ದಾಂತ್ ಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ