ಅತ್ಮವಂದೇ ಪರಮ ಸತ್ಯ. ಆತ್ಮದ ಹೊರತಾಗಿ ಈ ಮೂರು ಅವಸ್ತೆಗಳು ಅಸತ್ಯವಾದವುಗಳು. ಆತ್ಮದ ಹೊರತಾಗಿ ಮೂರು ಅವಸ್ತೆಗಳು ಚಲಿಸುತ್ತಿರುವ ಮೋಡಗಳ ಹಾಗೆ. ಆತ್ಮ ಯಾವಾಗಲು ಸ್ತಿರವಾದದ್ದು. ಮೂರು ಅವಸ್ತೆಗಳು ಅಸ್ತಿರವಾದದ್ದು. ಆತ್ಮವು ಈ ಮೂರು ಅವಸ್ತೆಗಳ ಸಾಕ್ಷಿಯಾಗಿರುವದು.
ಜಾಗೃತ ಹಾಗೂ ಸ್ವಪ್ನಾವಸ್ತೆಯಲ್ಲಿ ಅನುಬವಿಸಿದ ವ್ಯಯಕ್ತಿಕ ಅನುಬವಗಳಿಗೂ ಹಾಗೂ ಆತ್ಮಕ್ಕೂ ಯಾವದೇ ಸಂಬಂದವಿಲ್ಲ. ಯಾಕೆಂದರೆ ಆತ್ಮವು ಎಲ್ಲ ಮೂರು ಅವಸ್ತೆಗಳಲ್ಲಿ ಪಸರಿಸಿರುವದರಿಂದ, ಆತ್ಮವನ್ನು ಬೇರೆಯಾಗಿ ಈ ಅವಸ್ತೆಗಳಲ್ಲಿ ಗುರಿತಿಸುವದು ಅಸಾದ್ಯ. ಮನಸ್ಸಿನ ರೂಪದಲ್ಲಿ ಪ್ರಕಟವಾಗುವ ಜಾಗೃತ ಮತ್ತು ಸ್ವಪನಾವಸ್ತೆಗಳು, ಸುಶುಪ್ತಿಯಲ್ಲಿ ಅತ್ಮವಾಗಿ ಲೀನವಾಗುವದು. ಆದರಿಂದ ದೇಹ ದೃಷ್ಟಿಯಲ್ಲಿ ಸತ್ಯ ಯಾವುದೆಂದು ನಿರ್ದರಿಸುವದು ಅಸಾದ್ಯ.
ದೇಹ ಸ್ವ ಅಸ್ತಿತ್ವವಲ್ಲ ಎಂದ ಮೇಲೆ ಈ ಮೂರು ಅವಸ್ತೆಗಳ ಸಾಕ್ಷಿ ,ದೇಹವಲ್ಲ, ಅದು ನಿರಾಕಾರವಾದ ಅತ್ಮವೆಂಬುದು ದ್ರುಡವಾಗುತ್ತದೆ. ಆದ್ದರಿಂದ ಆತ್ಮ ದೃಷ್ಟಿಯಲ್ಲಿ ಈ ಮೂರು ಅವಸ್ತೆಗಳು, ಅರಿವಿನ ರೂಪದಲ್ಲಿರುವ ಆತ್ಮ ದಿಂದ ಉದ್ಬವಿಸಲ್ಪಟ್ಟ ಮರೀಚಿಕೆ ಮಾತ್ರ. ಆದ್ದರಿಂದ ಈ ಮೂರು ಅವಸ್ತೆಗಳು ಮರೀಚಿಕೆಯಷ್ಟೇ ಅಸತ್ಯವಾದವುಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ