ಶುಕ್ರವಾರ, ಆಗಸ್ಟ್ 6, 2010

ಈ ಮರಿಚಿಕೆಗೆ ಕಾರಣಿಬೂತವಾದ ಆತ್ಮವೇ, ಪರಮ ಸತ್ಯ. ಪರಮ ಸತ್ಯವೇ ಬ್ರಮ್ಹ


ಸಾಮಾನ್ಯ ವ್ಯಕ್ತಿ,ದರ್ಮ,ದೇವರು,ಸಮಾಜ್, ಜಗತ್ತಿನ ಹಾಗೂ ತನ್ನ ವ್ಯಯಕ್ತಿಕ ಅನುಬವಗಳನ್ನು ದೇಹದ್ರುಷ್ಟಿಯಿಂದ ಅವಲೋಕಿಸುವದರಿಂದ, ಈ ಆಕಾರ,ಸಮಯ ಹಾಗೂ ಅಂತರದ ಕಕ್ಷೆಯಿಂದ ಹೊರಬರುವದುa ಅಸಾದ್ಯ. ಈ ಆಕಾರ,ಸಮಯ ಹಾಗೂ ಅಂತರದ ಕಕ್ಷೆಯಿಂದ ಹೊರ ಬರದೆ,  ಹುಟ್ಟು,ಜೀವನ,ಸಾವು ಹಾಗೂ ಜಗತ್ತಿನ ಅನುಬವದ ಕಕ್ಷೆಯಿಂದ ಹೊರಬರುವದು ಅಸಾದ್ಯ. ಹುಟ್ಟು,ಜೀವನ,ಸಾವು ಹಾಗೂ ಜಗತ್ತಿನ ಅನುಬವದ ಕಕ್ಷೆಯಿಂದ ಹೊರ ಬರದೆ, ದ್ವೈತ ಬಾವದ ಕಕ್ಷೆಯಿಂದ ಹೊರಬರುವದು ಅಸಾದ್ಯ.  ದ್ವೈತ ಬಾವದ ಕಕ್ಷೆಯಿಂದ ಹೊರಬರದೆ, ಮನಸ್ಸಿನ ಕಕ್ಷೆಯಿಂದ ಹೊರಬರುವದು ಅಸಾದ್ಯ.ಮನಸ್ಸಿನ ಕಕ್ಷೆಯಿಂದ ಹೊರಬರದೆ, ಪರಮ ಸತ್ಯದ ಸಾಕ್ಷತ್ಕಾರ್ ಅಸಾದ್ಯ.  ಅದ್ದರಿಂದ ತನ್ನ ಸ್ವ ಅಸ್ತಿತ್ವ ದೇಹವಲ್ಲ, ತನ್ನ ಸ್ವ ಅಸ್ತಿತ್ವ ಅರಿವಿನರೂಪದಲ್ಲಿರುವ ಆತ್ಮ ಎಂದು ಸತ್ಯದ ಅನ್ವೇಷಣೆ  ಕೈ ಕೊಳ್ಳುವ ಮೊದಲು ತಿಳಿಯುವದು ಅತ್ಯಂತ ಅವಶ್ಯ್.  

ಅರಿವೂ,ತನ್ನ ಸ್ವ ಅಸ್ತಿತ್ವದ ಮರಿವಿನಿಂದ  ಆಕಾರದ ಪರಿಮಿತಿಯಲ್ಲಿ ವ್ಯಕ್ತಿಯಾಗೆ ವಿಚಾರ ಮಾಡುವದರಿಂದ ಹಾಗೂ ಎಲ್ಲವನ್ನು ಆಕಾರ ಆದಾರಿತವಾಗಿ ತೂಲನೆ ಮಾಡುವದರಿಂದ, ಅಜ್ಞಾನ ಹುಟ್ಟುತ್ತದೆ. ಈ ಅಜ್ಞಾನವೆ ದೇಹಬ್ರಮೆ. ಆದ್ದರಿಂದ ಈ ಅಜ್ಞಾನದಿಂದ ಹೊರಬರಲು ,ಈ ದೇಹ ಬ್ರಮೆ ಮಾತ್ರ ಎಂಬ ಅರಿವೂ, ಅರಿವಿಗಾದಾಗ[ಆತ್ಮ]  ಜಾಗೃತಾವಸ್ತೆ ಅಥವಾ ಮನಸ್ಸು, ಆತ್ಮದ ಮೇಲಿರುವ ಮಾಯೆಯ ಹೊದಿಕೆ ಮಾತ್ರ. ಈ ಮಾಯೆಯು ಅರಿವಿನಲ್ಲಿ ಉಂಟಾದ ಮರೀಚಿಕೆ ಮಾತ್ರ. ಆದ್ದರಿಂದ  ಈ ಮರೀಚಿಕೆಯಾದ ಜಾಗೃತಾವಸ್ತೆ ಅಥವಾ ಮನಸ್ಸು ಮಿತ್ಯ. ಈ ಮರಿಚಿಕೆಗೆ ಕಾರಣಿಬೂತವಾದ ಆತ್ಮವೇ, ಪರಮ ಸತ್ಯ. ಪರಮ ಸತ್ಯವೇ ಬ್ರಮ್ಹ .                  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ