ಬುಧವಾರ, ಆಗಸ್ಟ್ 4, 2010

ಮಿತ್ಯ ಯಾವುದು ,ಸತ್ಯಯಾವದು ಎಂಬ ಅರಿವಾದಾಗ, ದೇಹವೇ ಕರ್ತೃ ವೆಂಬ ಅಹಂಕಾರ ಮಾಯವಾಗಿ ,ಆತ್ಮ ದೃಷ್ಟಿ ಸ್ಥಿರವಾಗಿ, ಅರಿವೂ ಸ್ಥಿಥ ಪ್ರಜ್ಞೆಯಲ್ಲಿ ಸ್ಥಿರ ವಾಗುವದು.



ದೇಹವೇ ಕರ್ತೃವೆಂದು ತಿಳಿದುಕೊಂಡಿವುದರಿಂದ, ಈ ಜಾಗೃತಾವಸ್ತೆಯಲ್ಲಿಯೆ ಜಗತ್ತಿನ  ಸುಖ ದುಖಗಳ ಬಾರ, ತನ್ನ ಮೇಲೆ ಇರುವುದೆಂದು ಪ್ರತಿ ವ್ಯಕ್ತಿ ತಿಳದಿರುತ್ತಾನೆ. ಆದರೇ ಆಳವಾಗಿ ಎಲ್ಲವನ್ನು ಅವಲೋಕಿಸಿದಾಗ ಇಡಿ ಜಾಗೃತಾವಸ್ತೆಯು, ಸ್ವಪ್ನಾವಸ್ತೆಯಂತೆ ಮಿತ್ಯ ಮಾತ್ರವೆಂಬ  ಅರಿವಾಗುವದು.  ಆದ್ದರಿಂದ ಈ ಮೂರು ಅವಸ್ತೆಗಳ ಅರಿವೂ ಇರುವದು ದೇಹಕಲ್ಲ ,ದೇಹ ಮತ್ತು ಜಗತ್ತಿನ ಅನುಬವದ ಸಾಕ್ಷಿಯಾಗಿರುವ,ಅರಿವಿನ ರೂಪದಲ್ಲಿರುವ ಆತ್ಮಕ್ಕೆ, ಎಂಬ ಅರಿವಾದಾಗ, , ಜಾಗೃತಾವಸ್ತೆಯಲ್ಲಿಯ  ಈ   ಹುಟ್ಟು, ಜೀವನ,ಸಾವು ಹಾಗೂ ಜಗತ್ತಿನ ಅನುಬವಗಳು ಮರೀಚಿಕೆ ಮಾತ್ರ. 

ಆತ್ಮದೃಷ್ಟಿಯಲ್ಲಿ ಅದರ ಸ್ವ ಸ್ವಬವವಾದ ಅರಿವನ್ನು ಹೊರತು ಪಡೆಸಿ, ಬಾಕಿಯೆಲ್ಲವೂ ಮಿತ್ಯ.  ದೇಹದೃಷ್ಟಿಯಲ್ಲಿ  ಮಾತ್ರ  ಈ ಜನನ,ಜೀವನ್ ,ಮರಣ ಹಾಗೂ ಜಗತ್ತಿನ ಅನುಬವಗಳು ಸತ್ಯವಾಗಿರುವವು. ಯಾವಾಗ ಈ ಮೂರು ಅವಸ್ತೆಗಳು ಮಿತ್ಯವಾಗಿದೆಯೆಂದು ಅರಿವಿಗೆ ,ಅರಿವಾದಾಗ , ಮಿತ್ಯವನ್ನು  ಸತ್ಯವೆಂದು ಅನುಬವಿಸುವ ಅನುಬವದಿಂದ ಮೋಕ್ಷ ಪ್ರಾಪ್ತಿಯಾಗುವದು.  ಮಿತ್ಯ ಯಾವುದು ,ಸತ್ಯಯಾವದು ಎಂಬ ಅರಿವಾದಾಗ, ದೇಹವೇ ಕರ್ತೃ ವೆಂಬ ಅಹಂಕಾರ ಮಾಯವಾಗಿ ,ಆತ್ಮ ದೃಷ್ಟಿ ಸ್ಥಿರವಾಗಿ,  ಅರಿವೂ  ಸ್ಥಿಥ ಪ್ರಜ್ಞೆಯಲ್ಲಿ ಸ್ಥಿರ ವಾಗುವದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ