ಸೋಮವಾರ, ಆಗಸ್ಟ್ 23, 2010

ತಾನೂ ದೇಹವಲ್ಲವೆಂಬ ಅರಿವಾಗಿ ,ತನ್ನ ಸ್ವ ಅಸ್ತಿತ್ವವಾದ ಅನಂತ ಇರುವಿಕೆಯಲ್ಲಿ ಎಚ್ಚತ್ತಾಗ ಈ ದೇಹ ಮತ್ತು ಜಗತ್ತು ಅರಿವನ ರೂಪದಲ್ಲಿರುವ ಆತ್ಮದಿಂದ ಉದ್ಬವವಾದ ಮರೀಚಿಕೆ


ಜಗತ್ತನ್ನು  ಅನುಬವಿಸುವ ವ್ಯಕ್ತಿಯಾಗಿ, ಹುಟ್ಟು,ಜೀವನ್ ,ಸಾವುಗಳ ಬ್ರಮೆ ಹೊಂದಿ ಮನೋ ಬಂದಿಯಾಗಿ, ಲವೂಕಿಕ ವ್ಯವಹಾರದಲ್ಲಿ ತೊಡಗಿ, ಈ ಲವೂಕಿಕ ಜೀವನವನ್ನು ನಿಜವೆಂದು ಅನುಬವಿಸುತ್ತಿರುವ ಅರಿವಿಗೇ, ತಾನು  ಈ ದೇಹವಲ್ಲ ,ತಾನು ಈ ಮನಸ್ಸಿನ  ರೂಪದಲ್ಲಿರುವ ಈ ವಿಶ್ವವೂ ಅಲ್ಲ, ತಾನೂ ನಿರ್ಗುಣ, ನಿರಾಕಾರ  ಅನಂತ ಇರುವಿಕೆಯಾದ ಆತ್ಮವೆಂಬ ಅರಿವೂ, ತನ್ನ  ಸ್ವ  ಅಸ್ತಿತ್ವದ ಅನ್ವೇಷಣೆಯಿಲ್ಲದೆ ಅಸಾದ್ಯ . 

ತಾನೂ ಜಗತ್ತಿನಲ್ಲಿ ಹುಟ್ಟಿರುವ ವ್ಯಕ್ತಿಯಾಗಿ ತನ್ನದೇಹಾದಾರಿತ  ಉಹೆಗಳ ಆದಾರದ ಮೇಲೆ ದರ್ಮ ,ದೇವರು, ದರ್ಮ ಗ್ರಂಥಗಳನ್ನು ಸೃಷ್ಟಿಸಿ, ಈ ಉಹಾದಾರಿತ  ದರ್ಮ ದೇವರುಗಳ ನಿಜವೆಂದು  ನಂಬಿ ದರ್ಮರಕ್ಷಣೆ ಹಾಗೂ ಉಪಾಸನೆಗಳಲ್ಲಿ  ಕಾಲಹರಣ  ಮಾಡುತ್ತಿರುವ ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೇ ತಾನೂ ದೇಹವಲ್ಲವೆಂಬ ಅರಿವಾಗಿ, ತನ್ನ ಸ್ವ ಅಸ್ತಿತ್ವವಾದ ಅನಂತ ಇರುವಿಕೆಯಲ್ಲಿ ಎಚ್ಚತ್ತಾಗ, ಈ ದೇಹ ಮತ್ತು ಜಗತ್ತು ಅರಿವನ ರೂಪದಲ್ಲಿರುವ ಆತ್ಮದಿಂದ ಉದ್ಬವವಾದ ಮರೀಚಿಕೆ ಮಾತ್ರ  ಎಂಬ ಅರಿವಾಗಿ, ತನ್ನ ಸ್ವ ಸ್ವಬಾವವಾದ  ಅನಂತ ಇರುವಿಕೆಯಲ್ಲಿ ಒಂದಾಗಿ ಅದ್ವೈತವಾಗುವದು.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ