ಸೋಮವಾರ, ಆಗಸ್ಟ್ 23, 2010

ಈ ಅದ್ವೈತವಾದ ಪರಮ ಸತ್ಯದ ಅರಿವೂ, ದರ್ಮಾದಾರಿತ ಮಡಿವಂತಿಕೆಯ ಅದ್ವೈತ ಮಾರ್ಗದಿಂದ ಪ್ರಾಪ್ತಿಸಿಕೊಳ್ಳುವದು ಅಸಾದ್ಯ.


ವ್ಯಕ್ತಿ , ತನ್ನ  ಸ್ವ  ಅಸ್ತಿತ್ವದ  ಅನ್ವೇಷಣೆಗೆ  ತೊಡಗಿದಾಗ ಈ  ದೇಹ  ಸ್ವ ಅಸ್ತಿತ್ವ ಅಲ್ಲ ಎಂಬ ಅರಿವಾದಾಗ, ದೇಹವೇ ಸ್ವ ಅಸ್ತಿತ್ವವೆಂದು ಬಗೆದು ವ್ಯಕ್ತಿಯಾಗಿ ಅನುಬವಿಸಿದ  ಈ ಜಗತ್ತು ಹಾಗೂ ಜಗತ್ತಿನಲ್ಲಿ ಅನುಬವಿಸಿದ ವ್ಯಯಕ್ತಿಕ ಅನುಬವಗಳಾದ ಹುಟ್ಟು,ಜೀವನ್ ಹಾಗೂ ಮರಣದ ಅನುಬವಗಳು ಕೇವಲ    ಬ್ರಮೆ ಮಾತ್ರ ಎಂಬುದು ಕಚಿತಗೊಂಡಾಗ, ಈ  ಬ್ರಮೆ ಕಳಚಿ ತನ್ನ ಸ್ವ ಸ್ವರೂಪದ ದರ್ಶನ ಅರಿವಿನರೂಪದಲ್ಲಿರುವ ಆತ್ಮಕ್ಕೆ ಆದಾಗ, ಅದ್ವೈತ ಸತ್ಯ ಮಾತ್ರ ಪರಮ ಸತ್ಯವೆಂದು ಕಚಿತವಾಗುವದು.   

ಈ ಅದ್ವೈತವಾದ ಪರಮ ಸತ್ಯದ ಅರಿವೂ,  ದರ್ಮಾದಾರಿತ ಮಡಿವಂತಿಕೆಯ ಅದ್ವೈತ ಮಾರ್ಗದಿಂದ ಪ್ರಾಪ್ತಿಸಿಕೊಳ್ಳುವದು ಅಸಾದ್ಯ.  ಯಾಕೆಂದರೆ ಯಾವದೇ ದರ್ಮಾದಾರಿತ ಮುಕ್ತಿ ಮಾರ್ಗಗಳು ದೇಹದಾರಿತವಾಗಿವೆ, ಆದ್ದರಿಂದ ಅವುಗಳಿಂದ ಆತ್ಮ ಜ್ಞಾನವಾಗುವದು ಅಸಾದ್ಯ. ದರ್ಮದಾರಿತ ಅದ್ಯಾತ್ಮವು ಲವುಕಿಕ  ಜೀವನದಲ್ಲಿ ಅಸ್ತೆ ಇದ್ದವರಿಗಾಗಿ ಸೃಷ್ಟಿಸಿದ ಸಿದ್ದಾಂತ, ಅದ್ದರಿಂದ  ಮಡಿವಂತಿಕೆಯ ಅದ್ವೈತ ಸಿದ್ದಾಂತದ  ಪಾಂಡಿತ್ಯದಿಂದ , ಪರಮ ಸತ್ಯದ ಅರಿವಾಗುವದು ಅಸಾದ್ಯ.  ಪರಮ ಸತ್ಯದ  ಸ್ವ ಅನ್ವೇಷಣೆ ಒಂದೇ ಮಾರ್ಗ.                                     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ