ಸ್ವ ಅಸ್ತಿತ್ವ ದೇಹವಲ್ಲ ,ಸ್ವ ಅಸ್ತಿತ್ವವು ಅರಿವಿನ ರೂಪದಲ್ಲಿರುವ ಆತ್ಮ ಎಂಬ ಅರಿವೂ ಆದಾಗ, ತಾನೂ ವ್ಯಕ್ತಿಯಾಗಿ ಸಂಪಾದಿಸಿದ ಎಲ್ಲ ಜ್ಞಾನವು, ಎಲ್ಲ ಅನುಬವಗಳು, ಎಲ್ಲ ನಂಬಿಕೆಗಳು, ಬಳುವಳಿಯಾಗಿ ಬಂದಂತಹ ಎಲ್ಲ ಸಂಸ್ಕಾರಗಳು ಹಾಗೂ ನಡವಳಿಕೆಗಳು ಕೇವಲ ಮರೀಚಿಕೆ ಮಾತ್ರ.
ನಂಬಿಕೆಯ ದೇವರ ಅಸ್ತಿತ್ವ ನಂಬಿದ ವ್ಯಕ್ತಿಯನ್ನು ಅವಲಂಬಿಸಿರುತ್ತದ್ದೆ . ಆದ್ದರಿಂದ ನಂಬಿಕೆಯ ದೇವರ ಅಸ್ತಿತ್ವ ವ್ಯಕ್ತಿಯನ್ನು ಅವಲಂಬಿಸಿರುತ್ತದ್ದೆ .
ವ್ಯಕ್ತಿ ಮತ್ತು ಜಗತ್ತು ಬ್ರಮೆ ಮಾತ್ರ ಎಂಬ ಅರಿವಾದಾಗ, ವ್ಯಕಿಯಾಗಿ ನಂಬಿದಂತ ದೇವರಿಗೆ ಯಾವ ಬೆಲೆಯೂ ಇರದು. ಆದ್ದರಿಂದ ಆತ್ಮದಿಂದ ಉದ್ವವವಾದ ಈ ಎಲ್ಲ ಅನುಬವಗಳಿಗೆ ಕಾರಣಿಬೂತವಾದ ಆತ್ಮವೇ, ಪರಮ ಸತ್ಯ. ಆದ್ದರಿಂದ ಅಸತ್ಯವಾದ ನಂಬಿಕೆಯ ದೇವರನ್ನು ಆರಾದಿಸುವದರಿಂದ ಆತ್ಮ ಜ್ಞಾನ ಅಸಾದ್ಯ.
ಸ್ವ ಅಸ್ತಿತ್ವದ ಸ್ವಬಾವವಾದ ನಿರ್ಗುಣ,ನಿರಾಕಾರ,ನಿರಾದಾರವಾದ ಅನಂತ ಇರುವಿಕೆಯಾದ ಆತ್ಮ ಎಂಬ ಅರಿವೂ ದ್ರುಡವಾದಾಗ ಈ ಮರಿಚಿಕೆಯಾದ ಮನಸ್ಸು ಅನಂತ ಇರುವೆಕೆಯಾದ ಅಕಂಡತ್ವದಲ್ಲಿ ಲೀನವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ