ಶನಿವಾರ, ಆಗಸ್ಟ್ 28, 2010

ಎಲ್ಲಿಯವರೆಗೆ ಈ "ನಾನು" ಎಂಬುದನ್ನು ಸ್ವ ಅಸ್ತಿತ್ವವೆಂದು ಪರಿಗಣಿಸುತ್ತೆವೆಯೋ, ಅಲ್ಲಿಯವರಗೆ ಪರಮ ಸತ್ಯದ ಜ್ಞಾನ ಅಸಾದ್ಯ. "





"ನಾನು " ಎಂಬ ಬ್ರಮೆಯೊಳಗೆ ಜಗತ್ತನ್ನು ಅನುಬವಿಸುತ್ತಿರುವ  ವ್ಯಕ್ತಿಯಾಗಿ, ಹುಟ್ಟು ,ಜೀವನ್ ಮತ್ತು ಸಾವಿನ ಅನುಬವಗಳನ್ನೂ  ನಿಜವೆಂದು ಬಗೆದು, ಹುಟ್ಟಿನ ವ್ಯಕ್ತಿತ್ವವನ್ನು  ಸ್ವ ಅಸ್ತಿತ್ವವೆಂದು ತಿಳಿದಿರುವದರಿಂದ ಅಜ್ಞಾನ ಉದ್ಬವವಾಗಿದೆ . ಈ ಅಜ್ಞಾನದಿಂದ ಹೊರಬರಲು "ನಾನು" ಎಂಬುದು  ಸ್ವ ಅಸ್ತಿತ್ವ ವಲ್ಲ ಹಾಗೂ ಸ್ವ ಅಸ್ತಿತ್ವವು "ನಾನು" ಎಂಬುದರ ಹೊರತಾಗಿದೆ ,ಎಂಬುದನ್ನು ಅರಿಯುವದು ಅತ್ಯಗತ್ಯ. 

 ಎಲ್ಲಿಯವರೆಗೆ ಈ "ನಾನು" ಎಂಬುದನ್ನು ಸ್ವ ಅಸ್ತಿತ್ವವೆಂದು ಪರಿಗಣಿಸುತ್ತೆವೆಯೋ, ಅಲ್ಲಿಯವರಗೆ ಪರಮ ಸತ್ಯದ ಜ್ಞಾನ ಅಸಾದ್ಯ. "ನಾನು" ಎಂಬುದು ಒಂದು ಮಾಯೆ. ಈ "ನಾನು"  ಎಂಬ  ಮಯಾಜಾಲದಿಂದ ಹೊರಬರಲು,  ಈ ಮನಸ್ಸಿನ ರೂಪದಲ್ಲಿರುವ "ನಾನು" ಎಂಬುದರ ಸತ್ಯಾ ಸತ್ಯತೆಯ  ಬಗ್ಗೆ  ಆಳವಾಗಿ ಆಧ್ಯಯನ ಮಾಡುವದು ಅತ್ಯಗತ್ಯವಾಗಿದೆ.  ಪರಮ ಸತ್ಯವು ಈ "ನಾನು" ಎಂಬ ಬ್ರಮೆಯಲ್ಲಿ ಅಡಗಿದೆ. 
ಆದ್ದರಿಂದ ಈ "ನಾನು" ಎಂಬ ಬ್ರಮೆಯ ಆದಾರಿತವಾದ ದರ್ಮ,ದೇವರು,ವೇದಾಂತ,ಸಿದ್ದಾಂತಗಳಿಗೇ ಪರಮ  ಸತ್ಯದ  ಅನ್ವೇಷಣೆಯಲ್ಲಿ  ಯಾವ ಬೆಲೆಯೂ ಇಲ್ಲ.  ಆದ್ದರಿಂದ "ನಾನು" ಎಂಬುದು ಏನು ಎಂಬುದನ್ನು ಅರಿಯುವದು, ಪರಮ  ಸತ್ಯದ ಅನ್ವೇಷಕರಿಗೆ  ಅತ್ಯವಶ್ಯಕವಾಗಿದೆ.
       
Enhanced by Zemanta

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ