ಗುರುವಾರ, ಆಗಸ್ಟ್ 5, 2010

ದೇಹಬ್ರಮೆ ಕಳಚಿ, ಆತ್ಮ ನಗ್ನವಾದಾಗ, ಈ ಜಗತ್ತಿನ ಅನುಬವ ಮಿತ್ಯ ಮಾತ್ರ.


ವರ್ತಮಾನ ,ಬೂತ್, ಬವಿಷ್ಯ ಗಳ ಅನಿಸಿಕೆ, ದೇಹ ಬ್ರಮೆ ಆದಾರಿತವಾದವುಗಳು ಆದ್ದರಿಂದ ಅವುಗಳು ಬ್ರಮೆ ಮಾತ್ರ. ನಾನು ಅಥವಾ ಮನಸ್ಸು ಇದ್ದಾಗ ಮಾತ್ರ ,ಆಕಾರ , ಅಂತರ , ಸಮಯದ  ಪ್ರಜ್ಞೆ ಇರುತ್ತದ್ದೆ.  ಆದ್ದರಿಂದ   ಆಕಾರ , ಅಂತರ , ಸಮಯವೆಂದರೆ ಮನಸ್ಸು .  

ಈ ಜಗತ್ತಿನ  ವ್ಯವಹಾರದಲ್ಲಿ ತೊಡಗಿ ,ಜೀವನದ ಏರೀಳೀತಗಳ ವ್ಯಕ್ತಿಗತವಾದ ಅನುಬವಗಳು, ಹುಟ್ಟಿನ ನಂಬಿಕೆಯಿಂದ ಬಳುವಳಿಯಾಗಿ  ಬಂದ ಸಾಂಪ್ರದಾಯಿಕ  ನಡುವಳಿಕೆಗಳು, ಸಮಾಜದ ನೀತಿ ನಿಯಮಗಳ  ಅಳವಡಿಕೆಗಳಿಂದ ಸಂಸ್ಕಾರ್ ಹೊಂದಿದಂತಹ, ವ್ಯಕ್ತಿಬ್ರಮೆಯಲ್ಲಿರುವ ಈ ಅರಿವಿಗೇ, ದೇಹದಾರಿತ ವಿಚಾರಗಳು ಹುಟ್ಟಿ,ವಿಚಾರಗಳ  ಸರಣಿಯಲ್ಲಿ  ಸಿಕ್ಕಿ, ದೇಹವೇ ತನ್ನ ಸ್ವ ಅಸ್ತಿತ್ವ ವೆಂದು ತಿಳಿದಿರುವಾಗ, ತಾನಿರುವ  ಈ ಜಗತ್ತಿನ ಅಸ್ತಿತ್ವವನ್ನು ನಿಜವಲ್ಲವೆಂದು ನಂಬಲು, ತಾನೂ ದೇಹ ಅಲ್ಲ , ತಾನೂ ಅರಿವಿನ ರೂಪದಲ್ಲಿರುವ ನಿರಾಕಾರವಾದ ಆತ್ಮವೆಂಬುದನ್ನು ಖಚಿತ ಪಡಿಸಿಕೊಂಡಾಗ ಮಾತ್ರ ಸಾದ್ಯ.

ಆತ್ಮದೃಷ್ಟಿಯಲ್ಲಿ ಎಲ್ಲವನ್ನು ಅವಲೋಕಿಸುವದನ್ನು ರೂಡಿಸಿಕೊಂಡಾಗ, ದೇಹದ್ರುಷ್ಟಿಯ ವಿಚಾರಗಳು,ಅನುಬವಗಳು ಮಿತ್ಯವೆಂದು ತನಗೆ ತಾನೇ  ಸಾಬಿತು ಪಡಿಸಿಕೊಂಡಾಗ, ದೇಹಬ್ರಮೆ ಕಳಚಿ, ಆತ್ಮ ನಗ್ನವಾದಾಗ, ಈ ಜಗತ್ತಿನ ಅನುಬವ  ಮಿತ್ಯ ಮಾತ್ರ.                                   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ