ಗುರುವಾರ, ಆಗಸ್ಟ್ 5, 2010

ಈ ಅಜ್ಞಾನವೇ ಮಿತ್ಯವನ್ನು ಸತ್ಯವಾಗಿ ಅನುಬವಿಸುವದಕ್ಕೆ ಮೂಲ ಕಾರಣ.


ನಾನು  ಎಂದರೆ ಮನಸ್ಸು.  ಈ ನಾನು ಅಥವಾ ಮನಸ್ಸು  ಎಂಬುದು ದೇಹ ಮತ್ತು ಜಗತ್ತಿಗಸ್ಟೇ ಸೀಮೀತ ವಾಗಿರದೇ , ಇಡಿ ಜಾಗೃತಾವಸ್ತೆಯ ಅನುಬವ     ಅಥವಾ ಇಡಿ ಸ್ವಪ್ನಾವಸ್ತೆಯ ಅನುಬವವನ್ನು ಪ್ರತಿನಿದಿಸುತ್ತದೆ.   ಆದ್ದರಿಂದ  ನಾನು ಅಥವಾ ಮನಸ್ಸನ್ನು  ದೇಹಕಷ್ಟೇ  ಸೀಮೀತ್ ಗೊಳಿಸಿದರೆ,  ಅಹಂಕಾರ ಹುಟ್ಟಿಕೊಂಡು  ದೇಹದ್ರುಷ್ಟಿಯಿಂದ  ಎಲ್ಲವನ್ನು  ನಿರ್ದರಿಸುವ ಬುದ್ಧಿ ಉಗಮವಾಗುವದು. ಈ ದೇಹದ್ರುಷ್ಟಿಯ ಬುದ್ದಿಯೇ ಅಜ್ಞಾನ. ಈ ಅಜ್ಞಾನವೇ  ಮಿತ್ಯವನ್ನು ಸತ್ಯವಾಗಿ ಅನುಬವಿಸುವದಕ್ಕೆ ಮೂಲ ಕಾರಣ. 
 
ಆದ್ದರಿಂದ, ಮಯೇಯಾದ ಈ  ಮನಸ್ಸಿನ ರೂಪದಲ್ಲಿರುವ ಜಾಗೃತಾವಸ್ತೆಯನ್ನು ನಿಜವೆಂದು ಅನುಬವಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿ , ತನ್ನ ಸ್ವ ಅಸ್ತಿತ್ವ ದೇಹವಲ್ಲ ವೆಂದು ಅರಿವಾಗಿ, ತನ್ನ ಸ್ವ ಅಸ್ತಿತ್ವವಾದ ನಿರಾಕಾರವಾದ ಅರಿವಿನ[ಆತ್ಮ]  ರೂಪದಲ್ಲಿ ಎಚ್ಚರಗೊಂಡಾಗ, ಈ ಜನನ,ಜೀವನ್,ಮರಣ, ಹಾಗೂ ಜಗತ್ತಿನ ಅನುಬವ,  ನಿಜವೆಂಬ ಬ್ರಮೆಯಿಂದ ಮುಕ್ತವಾಗಿ, ದೇಹದೃಷ್ಟಿ ಕರಗಿ, ಆತ್ಮ ದೃಷ್ಟಿ ಪ್ರಾಪ್ತ್ ವಾಗುವದು. ಆತ್ಮ ದೃಷ್ಟಿಯಲ್ಲಿ  ಈ ಮೂರು ಅವಸ್ತೆಗಳು ಕೇವಲ್ ಅರಿವಿನಿಂದಾದ ಮರೀಚಿಕೆ ಮಾತ್ರ.   ಆದ್ದರಿಂದ ಈ ಮೂರು ಅವಸ್ತೆಗಳು ಮಾಯೆ ಎಂಬುವದನ್ನು ಆಳವಾದ ಸ್ವಯಂ ಅನ್ವೇಷಣೆಯಿಂದ ತಿಳಿಯುವದು ಅತ್ಯವಶ್ಯ.
   
ಆದರೇ, ದೇಹದೃಷ್ಟಿಯ ಕಲ್ವನೆಯ ಮೇಲೆ ಆದಾರದ ಮೇಲೆ ಸೃಷ್ಟಿ ಯಾದಂತ,  ದರ್ಮ, ದೇವರುಗಳು, ಸ್ವರ್ಗ,ನರಕಗಳು,ಪಾಪ,ಪುಣ್ಯ ಕರ್ಮ ಸಿದ್ದಾಂತಗಳನ್ನೂ    ಪುಷ್ಟಿಕರಿಸುವ  ಶಾಸ್ತ್ರಾದಾರಗಳು, ಅನುವಂಶಿಕವಾಗಿ ಬಂದಂಥಹ ಸಂಸ್ಕಾರಗಳಿಂದ ಮುಕ್ತಿ ಪಡೆಯದೇ ಆತ್ಮ ಜ್ಞಾನವಾಗುವದು ಅಸಾದ್ಯ. ಆದ್ದರಿಂದ  ದೇಹವು  ಸ್ವ ಅಸ್ತಿತ್ವ ಅಲ್ಲ ,ನಿರಾಕಾರವಾದ  ಆತ್ಮವೇ ನಿಜವಾದ ಅಸ್ತಿತ್ವ ವೆಂಬುದನ್ನು, ಸತ್ಯದ  ಅನ್ವೇಷಣೆಯ  ಮೊದಲ ಹಂತದಲ್ಲಿ ಅರಿಯುವದು ಅತ್ಯವಶ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ