ದರ್ಮ, ಕರ್ಮ,ಪಾಪ,ಪುಣ್ಯ ,ನರಕ್,ಸ್ವರ್ಗ ಕಲ್ಪನೆಗಳ್ಳನ್ನು, ದರ್ಮ ಗ್ರಂಥಗಳ ಮತ್ತು ಶಾಸ್ತ್ರಗಳ ಆಧಾರದ ಮೇಲೆ, ಅವುಗಳು ನಿಜವೆಂದು ಸಾದಿಸುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೆ, ಈ ದೇಹ ಮತ್ತು ಜಗತ್ತಿನ ಅಸ್ತಿತ್ವ, ಈ ಬ್ರಮೆಯೊಳಗೆ ಮಾತ್ರ ಎಂಬ ಅರಿವಿರದಾಗ, ಸತ್ಯದ ಪರಿಮೀಥಿಯಲ್ಲಿ ,ಈ ದೇಹ ಮತ್ತು ಜಗತ್ತಿನ ಅನುಬವಗಳಿರುವ ಜಾಗೃಥವಸ್ತೆಯೂ ಸಹ, ಸ್ವಪ್ನಾವಸ್ತೆಯಂತೆ ಬ್ರಮೆ ಮಾತ್ರವೆಂಬ ಅರಿವಾಗುವದು.
ಬೇಕು,ಬೇಡಗಳ ,ಮಾಡುವದು ,ಬಿಡುವದು,ಸತ್ಯ ,ಅಸತ್ಯ,ಸರಿ,ತಪ್ಪುಗಳ್ಳನ್ನು ನಿರ್ಣಯಿಸುವ ಅಹಂಕಾರವು, ಈ ದೇಹ ಮತ್ತು ಜಗತ್ತಿನ ಬ್ರಮೆಯ ಅನುಬವವಾದ ಜಾಗೃತಾವಸ್ತೆಯಲ್ಲಿ ಮಾತ್ರ ತನ್ನ ಅಸ್ತಿತ್ವ ಹೊಂದಿರುವದರಿಂದ ,ಅಹಂಕಾರದ ಅದಾರಿತವಾದ ಎಲ್ಲಾ ಅನುಬವಗಳು ಮತ್ತು ಸಂಗ್ರಹಿಸಿದಂತ್ ಜ್ಞಾನಗಳೆಲ್ಲವೂ ಬ್ರಮೆಯಾದ್ ಜಾಗೃಥಾವಸ್ತೆಯಲ್ಲಿ ಸತ್ಯವೆನಿಸುವದು. ಯಾವಾಗ ಜಾಗೃಥವಸ್ತೆಯ ಅನುಬವವೇ ಮಿತ್ಯವಾಗಿರುವಾಗ ,ಮಿತ್ಯವನ್ನು ಸತ್ಯವೆಂದು ಆಬವಿಸುತ್ತಿರುವ ಅರಿವಿಗೇ, ತನ್ನ ತನದ ಅರಿವೂ ಆಧಿತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ