ಶನಿವಾರ, ಜುಲೈ 31, 2010

ಸತ್ಯ ಯಾವುದೆಂದು ಅರಿಯದೆ ,ಅಸತ್ಯದ ಅರಿವವಾಗುವದು ಅಸಾದ್ಯ


ದೇವರ ನಂಬಿಕೆಯೂ ದೇಹಬ್ರಮೆಯ ಆದಾರಿತ್ ವಾಗಿರುವದರಿಂದ , ದೇಹಬ್ರಮೆಯು ಜಗತ್ತಿನ ಬ್ರಮೆಯೋಳಗಿನ ಬ್ರಮೆಯಗಿರುವ ಕಾರಣ , ದೇಹ ಮತ್ತು ಜಗತ್ತಿನ ಬ್ರಮೆಯು ಜಾಗ್ರುಥಾವಸ್ತೆಯೋಳಗಿನ  ಬ್ರಮೆಯ ಅನುಬವವಾಗಿರುವದರಿಂದ, ಜಾಗೃತಾವಸ್ತೆಯೇ  ಬ್ರಮೆಯಾಗಿರುವದರಿಂದ, ಬ್ರಮೆಯೋಳಗಿನ ಅನುಬವಗಳು ಸತ್ಯವಿರಲು ಅಸಾದ್ಯ. 

ಬ್ರಮೆಯನ್ನು ಸತ್ಯವೆಂದು ಅನುಬವಿಸುವವರಿಗೆ ಸತ್ಯದ ಅರಿವೂ ಅಸಾದ್ಯ. ಈ ಬ್ರಮೆಯ ಮೂಲವನ್ನು ಜಾಲಾಡಿದಾಗ ಮಾತ್ರ ಸತ್ಯವೆನೆಂದೂ    ಅರಿವಾಗಲು ಸಾದ್ಯ.  ಆದರೇ ಲಾವೂಕಿಕ ಜೀವನದ ಏರು ಪೆರುಗಳ ಸರಿಹೊಂದಿಸುವದರಲ್ಲಿ ತೊಡಗಿರುವವರಿಗೆ ತಾವು ಬ್ರಮೆಯಲ್ಲಿರುವೆವೆಂಬ ಅರಿವೂ ಇಲ್ಲದೆ ಬ್ರಮೆಯೇನ್ನು  ನಿಜವೆಂದು ಅನುಬವಿಸುತ್ತಿರುವ ಕಾರಣ ,ಪರಮ ಸತ್ಯದ  ಅರಿವೂ ಆಗಲು ಸಾದ್ಯವೇ  ಇಲ್ಲ.   
ಆದ್ಯಾತ್ಮವನ್ನು ಅರಿಯಲು ಮೊದಲು ಸತ್ಯ ಯಾವುದು ಮತ್ತು ಅಸತ್ಯ ಯಾವುದು ಎಂದು  ಅರಿಯುವದು ಅಗತ್ಯ .    ಸತ್ಯ ಯಾವುದೆಂದು ಅರಿಯದೆ ,ಅಸತ್ಯದ ಅರಿವವಾಗುವದು ಅಸಾದ್ಯ .  ಆದ್ದರಿಂದ ಸ್ವಯಂ ಅಸ್ತಿತ್ವದ  ಅನ್ವೇಷಣೆ ಅತ್ಯಗತ್ಯ.                         

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ