ಶುಕ್ರವಾರ, ಜುಲೈ 30, 2010

ಅರಿವೂ ಮುಕ್ತಿಯಾಗಿ ತನ್ನ ನಿರಕಾರ ವಾದ ಸ್ವ ಸ್ವಬಾವದಲ್ಲಿ ಸ್ಥಿರಗೊಂಡಾಗ ಅದ್ವೈಥ್ ಸತ್ಯದ ಜ್ಞಾನವಾಗಿ,ಈ ಬ್ರಮೆ ಕರಗಿ ಬ್ರಹ್ಮ ವಾಗುವದು



ದೇಹ  ಮತ್ತು ಜಗತ್ತು ಮನಸಿನನೊಳಗೆ ಇರುವ ಅರಿವಿರದೆ, ದೇಹದಲ್ಲಿ ಮನ್ಸಸಿರುವದೆಂದು ದೇಹ  ಬ್ರಮೆಯಲ್ಲಿರುವ  ಅರಿವೂ, ಮನಸ್ಸು ದೇಹಕ್ಕೆ ಮಾತ್ರ ಸೀಮಿತ್ ವೆಂದು   ಭಾವೀಸಿರುವದರಿಂದ್, ಅಹಂಕಾರ ಹುಟ್ಟಿ ದೇಹ ಬ್ರಮೆಯಲ್ಲಿ,  ಎಲ್ಲವನ್ನು  ದೇಹ ದೃಷ್ಟಿಯಿಂದ ನೋಡಿ ನಿರ್ದರಿಸುವ ಕಾರಣ, ಪರಮ ಸತ್ಯದ ಅರಿವೂ ಆಗುವಧೆ  ಇಲ್ಲ.

ಈ ಜಗತ್ತಿನ ಬ್ರಮೆಯೊಳಗೆ,  ದೇಹ  ಬ್ರಮೆ ಹೊಂದಿರುವ ಅರಿವಿಗೇ,ತಾನೂ ದೇಹವಲ್ಲ ಹಾಗೂ ಜಗತ್ತು, ಜಗತ್ತಲ್ಲವೆಂಬ ಅರಿವಿರಧೆ,  ದೇಹ ಮತ್ತು ಜಗತ್ತಿನ ಅಸ್ತಿತ್ವ ನಿಜವೆಂದು ಬಗೆದು ಅನುಬವಿಸುತ್ತಿರುವ ಅರಿವಿಗೇ, ಈ ಹುಟ್ಟು ,ಜೀವನ್ ಹಾಗೂ ಸಾವಿನ ಅನುಬವಗಳು ನಿಜವೆಂದು ಅನುಬವಿಸುತ್ತಿರುವದು ಸಹಜ.

ಆದರೇ,  ತಾನೂ ದೇಹವಲ್ಲ ವೆಂಬ ಅರಿವೂ ಅರಿವಿಗದಾಗ ,ಈ ಹುಟ್ಟು,ಸಾವಿನ ಮತ್ತು ಜಗದ ಅನುಬವವಗಳು ಮಿತ್ಯವೆಂದು ಜಾಗೃಥವಸ್ತೆಯಲ್ಲಿ  ಜ್ಞಾನೋದಯವಾದಾಗ, ಜಾಗೃತಾವಸ್ತೆಯು, ಸ್ವಾಪ್ನವಸ್ತೆಯೆಂತೆ ಮಿತ್ಯವೆಂದು ಅರಿವಾದಾಗ, ಈ ಬ್ರಮೆಯನ್ನು ನಿಜವೆಂದು ಅನುಬವಿಸುವ ಅನುಬವದಿಂದ, ಈ   ಅರಿವೂ ಮುಕ್ತಿಯಾಗಿ ತನ್ನ ನಿರಕಾರ ವಾದ   ಸ್ವ ಸ್ವಬಾವದಲ್ಲಿ  ಸ್ಥಿರಗೊಂಡಾಗ ಅದ್ವೈಥ್ ಸತ್ಯದ ಜ್ಞಾನವಾಗಿ,ಈ   ಬ್ರಮೆ ಕರಗಿ ಬ್ರಹ್ಮ ವಾಗುವದು. 

ಬ್ರಮೆಯಲ್ಲಿರುವ ಜಾಗೃಥ್ ,ಸ್ವಪ್ನ ,ಸುಶುಪ್ತಿಗಳ ಅನುಬವಗಳು ಅರಿವೀನಿಂದಲೇ ,ಉದಯವಾಗಿ, ಅರಿವಿನಲ್ಲೆಯೇ ಅರಿವಾಗಿ ಲೀನವಾಗುವದೆಂಬ ಅರಿವೂ ಅರಿವಿಗದಾಗ ಆತ್ಮ ಜ್ಞಾನವಾಗುವದು.                              
          

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ